ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಲಿಗೆ ಹಾಲಿನಲ್ಲಿ ಸೋಪು ಯಾಕಪ್ಪಾ ಅಂದರೆ...

By Srinath
|
Google Oneindia Kannada News

milk-in-india-common-adulteration-elements
ಬೆಂಗಳೂರು, ಜ.10: ಇಡೀ ದೇಶದಲ್ಲಿ ಸರಬಾಜು ಆಗುತ್ತಿರುವ ಹಾಲಿನಲ್ಲಿ ಶೇ. 65ರಷ್ಟು ಹಾಲು ಕಲಬೆರೆಕೆಯಾಗಿದೆ ಎಂಬ ಮಾಹಿತಿ ದೃಢಪಟ್ಟಿದೆ. ಅಷ್ಟಕ್ಕೂ ಕಲಬೆರಕೆಯಾಗಲು ಹಾಲಿಗೆ ಹೆಚ್ಚಿನ ಪ್ರಮಾಣದಲ್ಲಿ ಏನು ಬೆರೆಸಿರುತ್ತಾರೆ ಅಂದರೆ ಗ್ಲುಕೋಸ್ ಮತ್ತು ಸ್ಕಿಮ್ ಮಿಲ್ಕ್ ಪೌಡರ್ (SMP).

ಸಾಮಾನ್ಯವಾಗಿ ಹಾಲಿನಲ್ಲಿ ಕಂಡುಬರುವ ಕಲಬೆರಕೆ ಪದಾರ್ಥಗಳೆಂದರೆ ವಿಷಕಾರಿ ರಾಸಾಯನಿಕಗಳು, ಯೂರಿಯಾ, ಹೈಡ್ರೋಜನ್ ಪೆರಾಕ್ಸೈಡ್, ಸಕ್ಕರೆ, ಸ್ಟಾರ್ಚ್, ಗ್ಲೊಕೋಸ್, ಫಾರ್ಮಾಲಿನ್ ಮತ್ತು ವನಸ್ಪತಿ ಕೊಬ್ಬು.

ಕೆಲವು ಋತುಮಾನದಲ್ಲಿ ಹಾಲಿನ ಸರಬರಾಜು ಪ್ರಮಾಣ ಕಡಿಮೆಯಾಗಿರುತ್ತದೆ. ಆಗ ಬೇಡಿಕೆಯನ್ನು ಸರಿದೂಗಿಸಲು ಅಂದರೆ ಹಾಲಿನ ಪ್ರಮಾಣನ್ನು ಕಾಯ್ದುಕೊಳ್ಳಲು ಈ ಬೆರಕೆ ವಸ್ತುಗಳನ್ನು ಹಾಲಿಗೆ ಸೇರಿಸುತ್ತಾರೆ. ಆದರೆ ಇವು ಆರೋಗ್ಯಕ್ಕೆ ಖಂಡಿತ ಮಾರಕ. ಇನ್ನು ಹಾಲಿನಲ್ಲಿ ಸೋಪು ಯಾಕಪ್ಪಾ ಕಂಡುಬರುತ್ತದೆ ಅಂದರೆ ಹಾಲಿನ ದೊಡ್ಡ ದೊಡ್ಡ ಪಾತ್ರೆಗಳನ್ನು ತೊಳೆಯುವಾಗ ಈ ಸೋಪಿನ ಅಂಶ ಹಾಗೇ ಉಳಿದುಬಿಟ್ಟು, ಹಾಲಿನಲ್ಲಿ ಬೆರಕೆಯಾಗುತ್ತಿದೆ.

ಮರೆತ ಮಾತು: ಪುರಾತನ ಕಾಲದಿಂದಲೂ ಪರಿಪಾಲಿಸಿಕೊಂಡು ಬಂದಿರುವ ಪದ್ಧತಿಯಂತೆ ಹಾಲಿನ ಪ್ರಮಾಣ ಹೆಚ್ಚಿಸಲು ನೀರು ಬೆರೆಸುವುದು ಇದ್ದೇ ಇದೆ! ಅದೂ ಶುದ್ಧ ನೀರು ಅಂದ್ಕೊಂಡರೆ ನೀವು ಮುಗ್ಧರೇ ಸರಿ.

English summary
A study conducted by Food Safety Standards Authority of India (FSSAI) across 33 states has found that milk was adulterated with detergent, fat, neutralizers, hydrogen peroxide, sugar, starch, glucose, urea, formalin and vegetable fat besides the age-old practice of diluting it with water. Across the country, 68.4% of the samples were found contaminated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X