ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಧಾನ, ರಾಜ್ಯದ ಹಾಲು ಕ್ವಾರ್ಟರ್ ಅಷ್ಟು ಹಾಳು!

By Srinath
|
Google Oneindia Kannada News

milk-adulteration-in-india-at-alarming-end
ಬೆಂಗಳೂರು, ಜ.10: ಕೆಎಂಎಫ್ ತನ್ನ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರಿಗೆ 3 ರೂ. ಹೆಚ್ಚಳ ಮಾಡಿ ಕೈ ತೊಳೆದುಕೊಂಡಿದೆ. ಆದರೆ ಅದು ಸರಬರಾಜು ಮಾಡುತ್ತಿರುವ ಹಾಲಿನ ಗುಣಮಟ್ಟ ಅಷ್ಟೊಂದು ಸಮಾಧಾನಕರವಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಭಾರತೀಯ ಆಹಾರ ಸುರಕ್ಷಾ ಗುಣಮಟ್ಟ ಪ್ರಾಧಿಕಾರ (FSSAI) ಇತ್ತೀಚೆಗೆ ನಾನಾ ರಾಜ್ಯಗಳಲ್ಲಿ ಹಾಲು ಮಹಾಮಂಡಳಿಗಳು ಸರಬರಾಜು ಮಾಡುತ್ತಿರುವ ಹಾಲನ್ನು ಪರೀಕ್ಷೆಗೊಳಪಡಿಸಿದೆ. ಅದರ ಪ್ರಕಾರ ಇಡೀ ದೇಶದಲ್ಲಿ ಗೋವಾ, ಪಾಂಡಿಚೆರಿಯ ಹಾಲು ಅಮೃತಕ್ಕೆ ಸಮನಾಗಿದೆ. ಆದರೆ ನಮ್ಮದೇ ರಾಜ್ಯದಲ್ಲಿ ಹಾಲು ಕಲಬೆರಕೆ ಕೊಂಚ ಮಟ್ಟಿಗೆ ಆತಂಕಕಾರಿಯಾಗಿದೆ. ದೇಶದಲ್ಲಿ ರಾಜ್ಯದ ಹಾಲು ನಾಲ್ಕನೆಯ ಸ್ಥಾನದಲ್ಲಿದೆ. ಅಂದರೆ ಇಲ್ಲಿನ ಹಾಲು ಶೇ. 22 ರಷ್ಟು ಹಾಳು.

ಆದರೆ ಅತ್ಯಂತ ಕಲಬೆರಕೆಯ ಹಾಲು ಸರಬರಾಜು ಆಗುತ್ತಿರುವುದು ಪಶ್ಚಿಮ ಬಂಗಾಲದಲ್ಲಿ. ಅಲ್ಲಿ ನೂರಕ್ಕೆ ನೂರು ಹಾಲು ಪರಿಶುದ್ಧವಲ್ಲ! ಇನ್ನು ದೇಶದ ರಾಜಧಾನಿಯಲ್ಲಿ ಶೇ. 70 ರಷ್ಟು ಹಾಲು ಕಲಬೆರಕೆ. ಗುಜರಾತ್, ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನದ ಹಾಲೂ ಸುರಕ್ಷಿತವಲ್ಲ. ಅದೇ ನೆರೆಯ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಾಲಿನ ಗುಣಮಟ್ಟ ದೇಶದಲ್ಲಿ ಎರಡು ಮತ್ತು ಮೂರನೆಯ ಸುರಕ್ಷಿತ ಸ್ಥಾನದಲ್ಲಿದೆ.
ಅಸಲಿಗೆ ಹಾಲಿನಲ್ಲಿ ಸೋಪು ಯಾಕಪ್ಪಾ ಕಂಡುಬರುತ್ತದೆ ಅಂದರೆ ...

English summary
Beware, 70% of milk samples picked up from New Delhi by the Food Safety Standards Authority of India (FSSAI), failed to conform to standards. States with comparatively better results are Karnataka where 22% of samples did not conform to the FSSAI standards, Kerala (28% ), Tamil Nadu (12%) and Andhra Pradesh (6.7%).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X