ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಪ್ರಧಾನಿಯಾಗಲು ಅಯೋಗ್ಯ: ಠಾಕ್ರೆ

By Mahesh
|
Google Oneindia Kannada News

Bal Thackeray
ಮುಂಬೈ, ಜ.10: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್‌ ಗಾಂಧಿ ಪ್ರಧಾನಿಯಾಗಲು ಸರಿಅಯದ ಯೋಗ್ಯತೆ ಪಡೆದಿಲ್ಲ. ರಾಹುಲ್ ಪ್ರಧಾನಿಯಾಗುವುದು ಸಾಧ್ಯವಿಲ್ಲದ ಮಾತು ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್‌ ನಾಯಕತ್ವದಲ್ಲಿ ಅವರು ನಾಯಕತ್ವದ ಗುಣಮಟ್ಟವನ್ನು ಹೊಂದಿಲ್ಲ. ಗಾಂಧಿ, ನೆಹರೂ,ಗೋವಿಂದ ವಲ್ಲಭ್‌ ಪಂತ್‌ ಅವರ ಕಾಲದ ನಂತರ ಧೀಮಂತ
ನಾಯಕತ್ವ ಕಂಡು ಬಂದಿಲ್ಲ ಎಂದು ಬಾಳಾ ಠಾಕ್ರೆ ಹೇಳಿದ್ದಾರೆ.

ಇತರೆ ಹಿಂದುಳಿದ ವರ್ಗದ ಶೇ. 27 ಮೀಸಲಾತಿಯೊಳಗೆ ಮುಸ್ಲೀಮರಿಗೆ ಶೇ. 4.5 ರಷ್ಟು ಒಳಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಉದ್ದೇಶದ ವಿರುದ್ಧ ಠಾಕ್ರೆ ಗುಡುಗಿದ್ದಾರೆ.

ದೇಶವನ್ನು ವಿಭಜಿಸುವ ಸಿದ್ಧತೆಯಾಗಬೇಕಾಗುತ್ತದೆ. ಎಐಸಿಸಿ ಅಧ್ಯಕ್ಷೆ ಸೊನೀಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಇದಕ್ಕೆಲ್ಲ ಕಾರಣ ಎಂದು ಠಾಕ್ರೆ ದೂಷಿಸಿದ್ದಾರೆ.

ಗಡಿ ವಿವಾದ: ಸುಪ್ರೀಂ ಕೋರ್ಟ್‌ನಿಂದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಇತ್ಯರ್ಥವಾಗುವರೆಗೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡುವ ಆಗ್ರಹಕ್ಕೆ ಕೇಂದ್ರ ಸರ್ಕಾರ ಕಿವಿಗೊಟ್ಟಿಲ್ಲ. ಮನಮೋಹನ್ ಸಿಂಗ್ ಮೇಣದ ಪ್ರತಿಮೆಯಂತೆ ವರ್ತಿಸುತ್ತಿದ್ದಾರೆ ಎಂದು ಠಾಖ್ರೆ ಟೀಕಿಸಿದ್ದಾರೆ.

English summary
AICC general secretary Rahul Gandhi, Shiv Sena chief Bal Thackeray said the Congress leader has no prospects of becoming Prime Minister of the country. The era of Gandhi, Nehru, Govind Vallabh Pant is gone. Now, there is nobody said Shiv Sen chief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X