ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಪ್ರಥಮ ಗೂಗಲ್ ಟಿವಿ ತರಲಿದೆ ಎಲ್ ಜಿ

By Mahesh
|
Google Oneindia Kannada News

Google TV logo
ಸಿಯೋಲ್, ಜ.10: ಲಾಸ್ ವೆಗಸ್ ನಲ್ಲಿ ನಡೆಯಲಿರುವ ಗ್ರಾಹಕ ಎಲೆಕ್ಟ್ರಾನಿಕ್ಸ್ ಮೇಳದಲ್ಲಿ ಪ್ರಪ್ರಥಮ ಬಾರಿಗೆ ಗೂಗಲ್ ಟಿವಿಯನ್ನು ಪರಿಚಯಿಸುವುದಾಗಿ ಎಲ್ ಜಿ ಎಲೆಕ್ಟ್ರಾನಿಕ್ಸ್ ಸಂಸ್ಥೆ ಹೇಳಿದೆ. ಸೋನಿ ಕಾರ್ಪ್ ಹಾಗೂ ಸ್ಯಾಮ್ ಸಂಗ ಎಲೆಕ್ಟ್ರಾನಿಕ್ಸ್ ಕೋ. ಕೂಡಾ ಇಂಟರ್ನೆಟ್ ಟಿವಿ ಮಾರುಕಟ್ಟೆಯಲ್ಲಿರುವ ಇತರೆ ಸಂಸ್ಥೆಗಳಾಗಿದೆ.

ಟಿವಿ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಮೊಬೈಲ್ ಸಾಫ್ಟ್ ವೇರ್ ಯಶಸ್ಸನ್ನು ಮತ್ತೆ ಪುನರಾವರ್ತಿಸಲು ಎಲ್ ಜಿ ಸಂಸ್ಥೆ ಯೋಜಿಸಿದೆ. ಆದರೆ, ಇಂಟರ್ ನೆಟ್ ಟಿವಿ ಎಂಬ ಪರಿಕಲ್ಪನೆ ಗ್ರಾಹಕರಿಗೆ ಇನ್ನೂ ಹೊಸದಾಗಿದೆ.

ಗೂಗಲ್ ಟಿವಿ ಮೂಲಕ ಗ್ರಾಹಕರು ಆನ್ ಲೈನ್ ವಿಡಿಯೋ, ವೆಬ್ ಸೈಟ್ ಗಳನ್ನು ಜಾಲಾಡಬಹುದು. ವಿಡಿಯೋ ಗೇಮ್ಸ್ ಅಪ್ಲಿಕೇಷನ್ ಗಳನ್ನು ಅಳವಡಿಸಿ ಮನರಂಜನೆ ಪಡೆಯಬಹುದು. ಇದೇ ರೀತಿ ಇತರೆ ಸಂಸ್ಥೆಗಳ ಅಪ್ಲಿಕೇಷನ್ ಗಳನ್ನು ಟಿವಿಯಲ್ಲಿ ಅಳವಡಿಸಬಹುದು. [ಉದಾ: ವಿವಿಡ್ ಎಂಟರ್ ಟೈನ್ಮೆಂಟ್ ನ ನೀಲಿ ಚಿತ್ರ ವೀಕ್ಷಣೆ App]

ಸೋನಿ ಟಿವಿ ಹಾಗೂ ಸ್ಯಾಮ್ ಸಂಗ್ ಗಳಲ್ಲಿ ಇನ್ ಬಿಲ್ಟ್ ಆಗಿ ಈ ಅನ್ವಯ ತಂತ್ರಾಂಶಗಳನ್ನು ಒಳವಡಿಸಿ ಗ್ರಾಹಕರಿಗೆ ನೀಡಲು ಸಿದ್ಧತೆ ನಡೆದಿದೆ.

ಗೂಗಲ್ ನ ಅಧಿಕೃತ ಬ್ಲಾಗ್ ಪ್ರಕಾರ ಚಿಪ್ ತಯಾರಕಾ ಸಂಸ್ಥೆ ಮಾರ್ವೆಲ್ ಟೆಕ್ನಾಲಜೀಸ್, ಚಿಪ್ ವಿನ್ಯಾಸಗಾರ ಮೀಡಿಯಾ ಟೆಕ್ ಹಾಗೂ ಟಿವಿ ತಯಾರಕ ಸಂಸ್ಥೆ ವಿಜಿಯೋ ಈಗ ಗೂಗಲ್ ಟಿವಿ ಸೌಲಭ್ಯದ ಹೊಸ ಪಾಲುದಾರರಾಗಿದ್ದಾರೆ.

2011ರಲ್ಲಿ ಇಂಟರ್ ನೆಟ್ ಟಿವಿ ಮಾರುಕಟ್ಟೆಯಲ್ಲಿ ಗೂಗಲ್ ಶೇ.2 ರಷ್ಟು ಪ್ರಗತಿ ಕಂಡಿದೆ. ಆದರೆ, ಗ್ರಾಹಕರಿಗೆ ಇನ್ನೂ ಗೂಗಲ್ ಟಿವಿ ಅಪ್ಯಾಯಮಾನವಾಗಬೇಕಿದೆ.

English summary
LG Electronics Inc all set to unveil its first Google TV next week. Google with partnering with Samsung Electronics, Sony Corp hopes to get success of its Android mobile software in the TV market. But, Google Tv in internet TV market is not so successful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X