ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧು ಬಂಗಾರಪ್ಪಗೆ 180 ಎಕ್ರೆ ನನಗೆ ಚಿಲ್ರೆ ಐದೆಕರೆ

By Srinath
|
Google Oneindia Kannada News

madhu-given-180-acres-shouts-kumar-bangarappa
ಬೆಂಗಳೂರು, ಜ. 9: ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಹಿರಿಯ ಪುತ್ರ ವಸಂತ್ ಕುಮಾರ ಬಂಗಾರಪ್ಪ ಏಕಾಂಗಿ ಹೋರಾಟ ಮುಂದುವರಿಸಿದ್ದಾರೆ. ಸೋತ ಸಿಪಾಯಿ ತರಹ ಟಿವಿಗಳಲ್ಲಿ ಮಾತನಾಡುತ್ತಿರುವ ಕುಮಾರ್, ಹೇಗಾದರೂ ಮಾಡಿ ಕುಟುಂಬವನ್ನು ಒಂದು ಮಾಡಿ ಎಂದು ಅಂಗಾಲಾಚುತ್ತಿದ್ದಾರೆ.

'ಕುಟುಂಬ ಕಲಹ ಅಂಥೆಲ್ಲ ಇಲ್ವೇ ಇಲ್ಲ. ನಾವ್ ಅಣ್ಣ ತಮ್ಮಂದಿರು ಅಪ್ಪನ ಎರಡು ಕಣ್ಣುಗಳಂತೆ ಇದ್ದೇವೆ' ಎಂದು ಹೇಳ್ ಹೇಳುತ್ತಲೇ ಕುಟುಂಬ ಕಲಹಕ್ಕೆ ಕಾರಣವಾಗಿರುವ ಒಂದೊಂದೇ ಅಂಶಗಳನ್ನು ಅವರು ಹೊರಹಾಕುತ್ತಾ ಇದ್ದಾರೆ. ಎಲ್ಲ ಸರಿ ಇದೆ ಅಂತಾದ್ರೆ ನಿಮ್ಮ ಸಮಸ್ಯೆ ಏನು? ಬೀದಿ ರಂಪಾಟವೆಲ್ಲ ಏಕೆ? ಅಂತ ಕೇಳಿದರೆ ಪ್ಯಾಲಿ ನಗೆ ಚೆಲ್ಲುತ್ತಾರೆ ವಸಂತ ಕುಮಾರ್.

ಈ ಮಧ್ಯೆ, ಎಲ್ಲ ಅಣ್ಣ-ತಮ್ಮಂದಿರ ಹಾಗೇ ಆಸ್ತಿಪಾಸ್ತಿಗಾಗಿ ಈ ಸೋದರರ ಸವಾಲು ನಡೆಯುತ್ತಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಮುಖ್ಯ ಸಂಗತಿಯೆಂದರೆ 2001ರಲ್ಲೇ ನಮ್ಮಪ್ಪ ಆಸ್ತಿ ಪಾಸ್ತಿ ಬಗ್ಗೆ ಎಲ್ಲ ವಿಷದವಾಗಿ ಹೇಳಿ ಮುಗಿಸಿದ್ದಾರೆ. ಅಲ್ಲಿನ್ನೇನೂ ಉಳಿದಿಲ್ಲ ಎಂದು ಸ್ವತಃ ವಸಂತ್ ಕುಮಾರ್ ಬಂಗಾರಪ್ಪನವರೇ ಒಂದು ಕಡೆ ಹೇಳಿದ್ದಾರೆ.

ಆದರೆ ಅವರೇ ಈಗ, ನಮ್ಮಪ್ಪ ಆಸ್ತಿ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಿದ್ದಾರೆ ಎಂದು ಗೋಳಾಡುತ್ತಿದ್ದಾರೆ. 'ಮಧು ಬಂಗಾರಪ್ಪ ಅವರಿಗೆ 180 ಎಕರೆ ಕೊಟ್ಟು ನನಗೆ 5 ಎಕರೇನೂ ಕೊಟ್ಟಿಲ್ಲ ಬಂಗಾರದಂತಹ ನಮ್ಮಪ್ಪ. ಹಿರಿಯ ಪುತ್ರ ಅಂತ ನಂಗೇನೂ ಆಸ್ತಿ ಬರೆದುಕೊಟ್ಟಿಲ್ಲ. ಬಿಟ್ಟು ಕೊಟ್ಟಿರುವುದು ಕೇವಲ ಬಂಗಾರಪ್ಪ ಹೆಸರು ಮಾತ್ರ' ಎಂದು ಸ್ವತಃ ಕುಮಾರ್ ಬಂಗಾರಪ್ಪ ಅವರೇ ಸುವರ್ಣ ನ್ಯೂಸ್ ವಾಹಿನಿಗೆ ತಿಳಿಸಿದ್ದಾರೆ.

ಹಾಗಾದರೆ ಪಿತ್ರಾರ್ಜಿತ ಆಸ್ತಿಗಾಗಿ ಕೋರ್ಟು ಕಚೇರಿ ಅಲೆಯುತ್ತೀರಾ ಅಂತ ಕೇಳಿದರೆ ಅಂಥದ್ದೇನೂ ಇಲ್ಲ. ನಾನು ತಮ್ಮನ ವಿರುದ್ಧ ಕಾನೂನು ಹೋರಾಟ ಮಾಡುವುದಿಲ್ಲ ಎನ್ನುತ್ತಾರೆ.

English summary
It is evident that Kumar and Madhu Bangarappa, two sons of Former Karnataka CM, late Bangarappa are fighting over his assets. At least that is what Kumar Bangarappa says: Madhu Bangarappa given 180 acres land by my Father but for me 5 acres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X