ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ್ಳೂರು ರಿಯಲ್ ಎಸ್ಟೇಟ್ ಮೇಲೆ NRIಗಳ ಕಣ್ಣು

By Mahesh
|
Google Oneindia Kannada News

NRIS show interest in Bangalore real estate
ಬೆಂಗಳೂರು, ಜ.9: ಅನಿವಾಸಿ ಭಾರತೀಯರು ಮತ್ತೆ ಬೆಂಗಳೂರಿನ ರಿಯಲ್ ಎಸ್ಟೇಟ್ ನತ್ತ ಕಣ್ಣುಹಾಯಿಸಿದ್ದಾರೆ. ರುಪಾಯಿ ಎದುರು ಡಾಲರ್ ಮೌಲ್ಯ ಏರಿಕೆಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂದು ಹೌಸಿಂಗ್ ಫೈನಾನ್ಸ್ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

ಡಾಲರ್ ಗಳನ್ನು ರುಪಾಯಿಗಳಾಗಿ ಪರಿವರ್ತಿಸಲು ಈ ರೀತಿ ಮಾರ್ಗವನ್ನು ಎನ್ನಾರೈಗಳು ಅನುಸರಿಸುತ್ತಿದ್ದಾರೆ ಎಂದು ಭಾರತೀಯ ಜೀವ ವಿಮಾ ನಿಗಮ(LIC)ದ ನಿರ್ದೇಶಕ, ಸಿಇಒ(LICHF) ವಿಜಯ್ ಕುಮಾರ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

ದುಬೈ ಹಾಗೂ ಕುವೈಟಿನಲ್ಲಿರುವ ಎಲ್ ಐಸಿ ವಿಭಾಗದಲ್ಲಿ ಈ ಬಗ್ಗೆ ಎನ್ನಾರೈಗಳ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಈ ವರ್ಷ ಶೇ 50-60ರಷ್ಟು ಏರಿಕೆ ಕಾಣಬಹುದು ಎನ್ನಲಾಗಿದೆ.

ಬೆಂಗಳೂರಿನ ಮೆಟ್ರೋ ರೈಲು ಯೋಜನೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳು ರಿಯಲ್ ಎಸ್ಟೇಟ್ ಬೇಡಿಕೆಗೆ ಪೂರಕವಾಗಲಿದೆ. ಮುಂದಿನ ಎರಡು ಮೂರು ವರ್ಷ ಉತ್ತಮ ಬೆಳವಣಿಗೆ ಕಾಣಬಹುದು.

ಎಲ್ ಐಸಿಯ ನಿಮ್ಮ ಮನೆ 2012 ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಸುಮಾರು 50ಕ್ಕೂ ಹೆಚ್ಚು ಬಿಲ್ಡರ್ ಗಳು 250ಕ್ಕೂ ಅಧಿಕ ಯೋಜನೆಗಳ ಬಗ್ಗೆ ಪ್ರದರ್ಶನ ಮಾಡಲಾಗಿತ್ತು.

English summary
Non-Resident Indians (NRIs) now shown keen interest Bangalore in the real estate sector following appreciation of the dollar vis-a-vis the rupee, LIC Housing Finance Limited officials say Bangalore metro rail project would transform the real estate sector in this city. LICHFL NIMMA MANE 2012 got good response.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X