ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಕಾಕದ ರೆಸಾರ್ಟ್ ನಲ್ಲಿ 12+ ಬಿಜೆಪಿ ಶಾಸಕರು

By Mahesh
|
Google Oneindia Kannada News

Balachandra and Asnotikar
ಗೋಕಾಕ, ಜ.5: ಬಿಜೆಪಿ ಮತ್ತೆ ರೆಸಾರ್ಟ್ ರಾಜಕೀಯಕ್ಕೆ ಇಳಿದಿದೆ. ಆನಂದ್ ಆಸ್ನೋಟಿಕರ್ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಶಾಸಕರು ಇಲ್ಲಿನ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಸಚಿವ ಗೋವಿಂದ ಕಾರಜೋಳ ತಳ್ಳಿಹಾಕಿದ್ದಾರೆ.

'ನಾವು ಇಲ್ಲಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ತಂದೆಯ ಪುಣ್ಯತಿಥಿ ಕಾರ್ಯಕ್ರಮಕ್ಕೆ ಆಗಮಿಸಿದ್ದೇವೆ. ಇದರಲ್ಲಿ ರಾಜಕೀಯ ಬೆರೆಸುವುದು ಬೇಡ' ಎಂದು ಸಚಿವ ಕಾರಜೋಳ ಹೇಳಿದ್ದಾರೆ.

ಆದರೆ, ಐವರು ಪಕ್ಷೇತರ ಶಾಸಕರು, ಆರು ಮಂದಿ ಬಿಜೆಪಿ ಶಾಸಕರು ಜೊತೆ ಜೊತೆಯಲ್ಲಿ ಹೀಗೆ ಕಾಣಿಸಿಕೊಂಡಿರುವುದು ಹಲವು ಊಹಾಪೋಹಕ್ಕೆ ಎಡೆಮಾಡಿದೆ. ಗೋಕಾಕದಿಂದ ಗೋವಾ ರೆಸಾರ್ಟ್ ಗೆ ಶಾಸಕರು ಗುಳೆ ಹೋಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಶಾಸಕರಾದ ನಂಜುಂಡಸ್ವಾಮಿ, ನಾಗರಾಜ್, ವೈ ಸಂಪಂಗಿ, ಸಾರ್ವಭೌಮ ಬಗಲಿ, ರಾಜು ಕಾಗೆ, ಶಿವನಗೌಡ ನಾಯಕ್, ಪಕ್ಷೇತರರಾದ ಗೂಳಿಹಟ್ಟಿ ಶೇಖರ್, ಶಿವರಾಜ್ ತಂಗಡಗಿ, ಡಿ ಸುಧಾಕರ್, ವೆಂಕಟರಮಣಪ್ಪ ಎಲ್ಲರೂ ಈ ಮುಂಚೆ ಬಿಜೆಪಿ ವಿರುದ್ಧ ಬಂಡಾಯಬ್ ಬಾವುಟ ಹಾರಿಸಿದ ಬಾಲಚಂದ್ರ ಜಾರಕಿಹೊಳಿ ಹಾಗೂ ಆನಂದ್ ಆಸ್ನೋಟಿಕರ್ ಅವರ ತಂಡದಲ್ಲಿ ಮೊದಲಿಂದಲೂ ಇದ್ದವರು ಎಂಬುದು ಗಮನಾರ್ಹ.

English summary
More than 12 BJP MLAs visited Balachandra Jarakiholi's father's ceremony and shifted to Gokak Resort. Minister Govind Karjola said we are here to attend family function no politics involved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X