ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಮಿಸಿ, ಮೈಸೂರಿನಲ್ಲಿ ಹಾಪ್ ಕಾಮ್ಸ್ ಮುಚ್ಚಿದೆ

By Mahesh
|
Google Oneindia Kannada News

Mysore Hopcoms Closed
ಮೈಸೂರು,ಜ.7: ನೌಕರರನ್ನು ಖಾಯಂಗೊಳಿಸುವುದು, ಖಾಯಂ ನೌಕರರಿಗೆ 5ನೇ ವೇತನ ಆಯೋಗದ ವೇತನ ಶ್ರೇಣಿಯನ್ನು ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಾಪ್ ಕಾಮ್ಸ್ ಸಿಬ್ಬಂದಿ ಅನಿರ್ಧಿಷ್ಟ ಕಾಲ ಮುಷ್ಕರ ಹೂಡಿದ್ದಾರೆ.

ಅರಮನೆ ಉತ್ತರ ದ್ವಾರದಲ್ಲಿರುವ ಕರ್ಜನ್ ಪಾರ್ಕ್‌ನಲ್ಲಿ ಆರಂಭವಾದ ಮುಷ್ಕರ ಮೂರು ದಿನಕ್ಕೆ ಕಾಲಿಟ್ಟರೂ ಇನ್ನೂ ಮುಕ್ತಾಯವಾಗುವ ಲಕ್ಷಣ ಕಂಡು ಬಂದಿಲ್ಲ.
ನೌಕರರಿಗೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಬೆಂಬಲ ಕೂಡಾ ಸಿಕ್ಕಿದೆ.

ಹಾಪ್‌ಕಾಮ್ಸ್ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ದತ್ತ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಇರುವ ಹಾಪ್‌ಕಾಮ್ಸ್‌ನ ನೂರಾರು ಮಂದಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಹಾಪ್ ಕಾಮ್ಸ್ ನಂಬಿಕೊಂಡು ಹಣ್ಣು ತರಕಾರಿ ಕೊಳ್ಳುತ್ತಿದ್ದ ಮೈಸೂರಿನ ನಗರವಾಸಿಗಳಿಗೆ ಭಾರಿ ತೊಂದರೆಯಾಗಿದೆ.

* 25 ರಿಂದ 30 ವರ್ಷ ಸೇವೆಸಲ್ಲಿಸಿರುವ ಖಾಯಂ ನೌಕರರಿಗೆ 5ನೆ ವೇತನ ಆಯೋಗದ ವೇತನ ಶ್ರೇಣಿಯನ್ನು ನಿಗದಿಪಡಿಸಬೇಕು.
* 18 ರಿಂದ 20 ವರ್ಷ ಸೇವೆ ಸಲ್ಲಿಸಿರುವ ನೌಕರರನ್ನು ಖಾಯಂಗೊಳಿಸಬೇಕು.
* ಜಿಲ್ಲೆಯಲ್ಲಿ 97 ಮಂದಿ ಖಾಯಂ ನೌಕರರು ಹಾಗೂ 28 ಮಂದಿ ದಿನಗೂಲಿ ನೌಕರರಿದ್ದಾರೆ. ಎಲ್ಲರಿಗೂ ಸಮನಾದ ಸರ್ಕಾರಿ ಸೌಲಭ್ಯ ಸಿಗಬೇಕು ಎಂದು ನೌಕರರು ಒತ್ತಾಯಿಸುತ್ತಿದ್ದಾರೆ.

English summary
Mysore division of Horticultural Producers Co-operative Marketing and Processing Society (HOPCOMS) outlets are closed following the Hopcoms staff indefinite strike. Hopcom employees demands also include implementation of 5th Pay Commission recommendations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X