ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕಮಾಂಡ್ ನಿಲುವಿಗೆ ಬೇಸತ್ತ ಯಡ್ಡಿ, ಪಕ್ಷಕ್ಕೆ ಗುಡ್ ಬೈ?

|
Google Oneindia Kannada News

Yeddiyuarrapa
ಬೆಂಗಳೂರು, ಜ. 7: ಹೈಕಮಾಂಡ್ ನಿರ್ಧಾರಕ್ಕೆ ವಿರುದ್ಧವಾಗಿ ಇಂದಿನಿಂದ ರಾಜ್ಯ ಪ್ರವಾಸ ಆರಂಭಿಸಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್ ವಿರುದ್ಧ ನಡೆ ಆರಂಭಿಸಿದ್ದಾರೆ. ತಮ್ಮ ವಿಭಿನ್ನ ವರಸೆ ತೋರಿಸುತ್ತಿರುವ ಯಡ್ಡಿ, ಬಜೆಪಿ ಪಕ್ಷ ತೊರೆಯುವ ನಿರ್ಧಾರ ಕೈಗೊಂಡರೂ ಅಚ್ಚರಿಯಲ್ಲ ಎಂಬಂತಾಗಿದೆ.

"ಯಾವುದೇ ಸ್ಥಾನಮಾನ ಬೇಡ, ದೆಹಲಿಗೆ ಹೋಗುವುದೂ ಇಲ್ಲ. ರಾಷ್ಟ್ರೀಯ ನಾಯಕರೇ ಇಲ್ಲಿಗೆ ಆಗಮಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ. ಬಿಜೆಪಿ ರಾಜ್ಯಕ್ಕೆ ಅನಿವಾರ್ಯ, ಆದರೆ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯವಲ್ಲ" ಎಂದು ಮಾರ್ಮಿಕವಾಗಿ ಹೇಳಿರುವ ಯಡಿಯೂರಪ್ಪ ಮಾತಿನಲ್ಲಿ ತಮಗೆ ಬಿಜೆಪಿ ಅನಿವಾರ್ಯವಲ್ಲ ಎಂಬ ಅರ್ಥವೂ ಧ್ವನಿಸುತ್ತಿದೆ.

ಈ ಎಲ್ಲಾ ಬೆಳವಣಿಗೆ ನೋಡಿದರೆ ಸದ್ಯದಲ್ಲೇ ರಾಜ್ಯ ಬಿಜೆಪಿ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಗೋಚರಿಸುವ ನಿರೀಕ್ಷೆ ಇದೆ. ರಾಜ್ಯ ಪ್ರವಾಸದ ಮೂಲಕ ಹೈಕಮಾಂಡ್ ಮಣಿಸುವ ಯಡ್ಡಿ ತಂತ್ರ ಯಶಸ್ವಿಯಾದರೂ ಆಗಬಹುದು. ಈಶ್ವರಪ್ಪ, ಹೈಕಮಾಂಡ್ ಹಾಗೂ ಡಿವಿಎಸ್ ನಡೆ ಕೂಡ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂಬುದನ್ನು ಮರೆಯುವಂತಿಲ್ಲ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಎಲ್ಲವೂ ಅಯೋಮಯ. ಇದಕ್ಕೆ ಅನುಗುಣವಾಗಿ ಯಡಿಯೂರಪ್ಪ ನಡೆ ಕೂಡ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ.

English summary
Former chief minister of Karnataka BS Yeddyurappa going against BJP high command and going to start state tour. Also there is doubt, is he ready to leave bjp?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X