ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನೂರುಮಠರೇ ಏಕೆ ಬೇಕು: ಮಾಜಿ ಕಾನೂನು ಸಚಿವರ ಪ್ರಶ್ನೆ

By Srinath
|
Google Oneindia Kannada News

why-promote-bannurmatt-only-for-lokayukta-moily
ಮಂಗಳೂರು, ಜ. 6: ಒಂದೆಡೆ ಕಾಂಗ್ರೆಸ್ ಪಕ್ಷದ ಅನಧಿಕೃತ ವಕ್ತಾರರಂತೆ ನ್ಯಾ ಎಸ್ಆರ್ ಬನ್ನೂರುಮಠರ ನೇಮಕಕ್ಕೆ ಅಸಮ್ಮತಿ ಸೂಚಿಸುತ್ತಿದ್ದರೆ ಪಕ್ಷದ ಹಿರಿಯ ನಾಯಕ, ಕೇಂದ್ರದ ಮಾಜಿ ಕಾನೂನು ಸಚಿವ ಹಾಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ ವೀರಪ್ಪ ಮೊಯ್ಲಿ ಅವರು ಬಿಜೆಪಿ ಸರಕಾರ ಬನ್ನೂರುಮಠ ಹೆಸರಿಗೆ ಜೋತುಬಿದ್ದಿರುವುದನ್ನು ಟೀಕಿಸಿದ್ದಾರೆ.

ಈ ಮಧ್ಯೆ, ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಕೊನೆಯವರೆಗೂ ಬನ್ನೂರುಮಠ ಹೆಸರನ್ನೇ promote ಮಾಡುವೆ. ರಾಜ್ಯಪಾಲರು ಆಗಲಿಲ್ಲವೆಂದರೆ ಬೇರೆ ಹೆಸರನ್ನು ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಸದಾನಂದ ಗೌಡ ಅವರು ಸುಳಿವು ನೀಡಿದ್ದಾರೆ.

ಇತ್ತೀಚೆಗೆ ಮಾ. ಮು. ಯಡಿಯೂರಪ್ಪ ಅವರ ವಿರೋಧ ಕಟ್ಟಿಕೊಂಡಿರುವ ಸದಾನಂದರು ಯಡಿಯೂರಪ್ಪ ಅವರ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಬನ್ನೂರುಮಠರ ನೇಮಕದಿಂದ ವಿಮುಖರಾಗಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, 'ಲೋಕಾಯುಕ್ತ ನೇಮಕ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯೇ ಇಲ್ಲ. ವಿವಾದಕ್ಕೆ ಸಿಲುಕಿರುವ ನ್ಯಾಯಮೂರ್ತಿ ಬನ್ನೂರುಮಠ ಅವರನ್ನೇ ಲೋಕಾಯುಕ್ತರಾಗಿ ನೇಮಿಸಬೇಕೆಂಬ ಹಠ ಏಕೆ? ನಿಷ್ಕಳಂಕ ನ್ಯಾಯಮೂರ್ತಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದು, ಅವರಲ್ಲೇ ಕೆಲವರ ಹೆಸರನ್ನು ಸೂಚಿಸಿ ಶೀಘ್ರ ನೇಮಕಾತಿ ಮಾಡಬಾರದೇ?' ಎಂದು ಮೊಯ್ಲಿ ಕೇಳಿದ್ದಾರೆ.

'ನ್ಯಾ.ಬನ್ನೂರುಮಠ ಅವರೂ ಒಳ್ಳೆವರು. ಆದರೆ ಅವರ ಇತ್ತೀಚಿನ ವರ್ತನೆಗಳು ಆಕ್ಷೇಪಕ್ಕೆ ಒಳಗಾಗಿವೆ. ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ವ್ಯಕ್ತಿಗಳು ಸಾಕಷ್ಟು ಮಂದಿ ಇರುವಾಗ ಅವರನ್ನು ನೇಮಿಸಬಹುದು. ಈ ನಿಟ್ಟಿನಲ್ಲಿ ನ್ಯಾ. ವೆಂಕಟಾಚಲ, ನ್ಯಾ. ಸಂತೋಷ್ ಹೆಗ್ಡೆ ಅವರು ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದಾರೆ' ಎಂದು ಗುರುವಾರ ಅವರು ಅಭಿಪ್ರಾಯಪಟ್ಟರು.

English summary
Union Corporate Affairs Minister and former Karnataka Chief Minister M Veerappa Moily sharply criticised the BJP Government in the State for its attempts to appoint Justice S R Bannurmath as the Lokayukta despite allegations against his holding site in the judicial layout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X