ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ, ಚೆನ್ನಿಗಪ್ಪ ವಿರುದ್ಧ ಲೋಕಾಯುಕ್ತ ಪೊಲೀಸ್ ಎಫ್ಐಆರ್

By Prasad
|
Google Oneindia Kannada News

Lokayukta police file FIR against HDK and Chennigappa
ಬೆಂಗಳೂರು, ಜ. 6 : ಅರ್ಕಾವತಿ ಬಡಾವಣೆಯ ಬಿಡಿಎ ನಿವೇಶನಗಳನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಮಾಜಿ ಶಾಸಕ ಚೆನ್ನಿಗಪ್ಪ ಮತ್ತು ಇನ್ನಿಬ್ಬರ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ.

ಚಾಮರಾಜನಗರದ ಮಹದೇವಸ್ವಾಮಿ ಎಂಬುವವರು ಜ.2ರಂದು ದಾಖಲಿಸಿದ್ದ ಖಾಸಗಿ ದೂರಿನ ಅನ್ವಯ ತನಿಖೆ ನಡೆಸಿ ಜ.6ರೊಳಗೆ ವರದಿ ನೀಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಸುಧೀಂದ್ರರಾವ್ ಅವರು ಆದೇಶಿಸಿದ್ದರು. ಸಿಆರ್‌ಪಿಸಿಯ ಸೆಕ್ಷನ್ 156(3) ಅಡಿಯಲ್ಲಿ ತನಿಖೆಗೆ ಆದೇಶ ನೀಡಲಾಗಿತ್ತು.

2007ರ ಅಕ್ಟೋಬರ್‌ನಲ್ಲಿ ತಣಿಸಂದ್ರ ಗ್ರಾಮದಲ್ಲಿ 3.8 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಲು ಕುಮಾರಸ್ವಾಮಿ ಆದೇಶಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಂದಿನ ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಕೂಡ ಕುಮಾರಸ್ವಾಮಿ ಜೊತೆ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ದೂರಲಾಗಿದೆ.

English summary
Lokayukta police have filed first information report (FIR) against HD Kumaraswamy and then forest minister Chennigappa in an illegal denotification case filed by Mahadevaswamy of Chamarajnagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X