ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4000 ಉದ್ಯೋಗಿಗಳನ್ನು ಕಿತ್ತು ಹಾಕಲಿದೆ ಪೆಪ್ಸಿ

By Mahesh
|
Google Oneindia Kannada News

Indra Nooyi
ನವದೆಹಲಿ, ಜ.5: ಅಮೆರಿಕ ಮೂಲದ ಬೃಹತ್ ತಂಪು ಪಾನೀಯ ಸಂಸ್ಥೆ ತನ್ನ ಉದ್ಯೋಗಿಗಳ ಪಿಂಚಣಿ ಹಣದ ಮೇಲೆ ಕಣ್ಣು ಹಾಕಿದೆ. ಹಿರಿಯ ಉದ್ಯೋಗಿಗಳನ್ನು ಮನೆಗೆ ಕಳಿಸಿ ಖರ್ಚು ವೆಚ್ಚ ಸರಿದೂಗಿಸಿಕೊಳ್ಳುವ ಯೋಜನೆ ಹಾಕಿದೆ. ಇದರ ಪರಿಣಾಮ ಸುಮಾರು 4 ಸಾವಿರ ಉದ್ಯೋಗಿಗಳು ಕೆಲಸಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಸಂಸ್ಥೆಯ ಖರೀದಿ ವಿಭಾಗದಲ್ಲಿ ಹೆಚ್ಚಿನ ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. 401(k) ಯೋಜನೆ[401(k) ಅಂದರೇನು?]ಗೆ ಅನುಗುಣವಾಗಿ ಉದ್ಯೋಗಳ ಸಂಖ್ಯೆಯನ್ನು ನಿಯಂತ್ರಿಸಿ ಹೆಚ್ಚಿನ ಆದಾಯಗಳಿಕೆಯತ್ತ ಪೆಪ್ಸಿಕೋ ಗಮನಹರಿಸಿದೆ ಎಂದು ದ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಪೆಪ್ಸಿಕೋ ಸಂಸ್ಥೆ 401(k) ಹೊಂದಾಣಿಕೆಯನ್ನು ಬದಿಗೊತ್ತಿದರೆ ಸುಮಾರು 75 ಮಿಲಿಯನ್ ಡಾಲರ್ ಉಳಿಸಬಹುದು ಎನ್ನಲಾಗಿದೆ.

3,00,000ಕ್ಕೂ ಅಧಿಕ ನೌಕರರನ್ನು ಜಾಗತಿಕವಾಗಿ ಹೊಂದಿರುವ ಪೆಪ್ಸಿಕೋ ಸಂಸ್ಥೆಯಲ್ಲಿ 2,000 ಮಂದಿ ಖರೀದಿ ವಿಭಾಗದಲ್ಲಿದ್ದಾರೆ. ಅಗತ್ಯಬಿದ್ದರೆ ಸಂಬಳದಾರರಿಗೆ ನೀಡುವ ಬೋನಸ್ ಗಳಿಗೂ ಕತ್ತರಿ ಹಾಕುವ ಸಾಧ್ಯತೆಯಿದೆ ಎಂದು ಸಿಇಒ ಇಂದ್ರ ನೂಯಿ ಹೇಳಿದ್ದಾರೆ.

English summary
Pepsico CEO Indra Nooyi said roughly 4,000 layoffs will be made in 2012. US based company also plan to reduce pension contributions in a bid to boost earnings. PepsiCo employs about 3,00,000 workers globally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X