ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಧ್ವಜ: ಶ್ರೀರಾಮಸೇನಾನಿಗಳ ಬಗ್ಗೆ ಮುತಾಲಿಕ್ ಏನನ್ನುತ್ತಾರೆ?

By Srinath
|
Google Oneindia Kannada News

sri-rama-sene-didnt-hoist-pak-flag-muthalik
ಸಿಂದಗಿ (ಬಿಜಾಪುರ ಜಿಲ್ಲೆ), ಜ 5: ಸಿಂದಗಿಯ ಮಿನಿ ವಿಧಾನಸೌಧದ ಎದುರು ಪಾಕ್ ಧ್ವಜ ಹಾರಿಸಿ ರಾಷ್ಟ್ರದ್ರೋಹವೆಸಗಿದ ಪ್ರಕರಣ ಸಂಬಂಧ ಇಂಡಿ ಡಿವೈಎಸ್ಪಿ ಎಂ.ಮುತ್ತುರಾಜ್ ನೇತೃತ್ವದ ಪೊಲೀಸ್ ತಂಡ ಶ್ರೀರಾಮಸೇನೆ ಸಂಘಟನೆಯ ಆರು ವಿದ್ಯಾರ್ಥಿಗಳನ್ನು ಮೂರೇ ದಿನಗಳಲ್ಲಿ ಬಂಧಿಸಿ, ಸ್ತುತ್ಯರ್ಹ ಕೆಲಸ ಮಾಡಿದ್ದಾರೆ.

ಬಂಧಿತರ ಪೈಕಿ ರಾಕೇಶ್ ಮಠ ಎಂಬುವವ ಶ್ರೀರಾಮ ಸೇನೆಯ ಸಿಂದಗಿ ಪಟ್ಟಣದ ವಿದ್ಯಾರ್ಥಿ ಘಟಕದ ಅಧ್ಯಕ್ಷ. ಉಳಿದವರು ಆ ಸಂಘಟನೆಯ ಪದಾಧಿಕಾರಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ಅವರು 'ಈ ಕುಕೃತ್ಯವೆಸಗಿದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿರುವ ಆರು ವಿದ್ಯಾರ್ಥಿಗಳು ನಮ್ಮ ಸಂಘಟನೆಗೆ ಸೇರಿದವರಲ್ಲವೇ ಅಲ್ಲ. ಘಟನೆಗೆ ಶ್ರೀರಾಮಸೇನೆಯನ್ನು ಹೊಣೆಯಾಗಿಸುವುದು ಸಾಧುವಲ್ಲ. ದೇಶಾಭಿಮಾನಿಗಳಾದ ನಾವು ದೇಶದ್ರೋಹ ಕೆಲಸ ಮಾಡೊಲ್ಲ' ಎಂದಿದ್ದಾರೆ.

ಪಾಕ್ ಧ್ವಜ ಹಾರಿಸಿದ್ದು ಯಾರೆಂಬುದು ನಮಗೆ ಗೊತ್ತು: 'ಅಷ್ಟೇ ಅಲ್ಲ. ಆ ಪಾಕಿಸ್ತಾನದ ಧ್ವಜವನ್ನು ಹಾರಿಸಿದವರು ಬಂಧಿತ ವಿದ್ಯಾರ್ಥಿಗಳು ಅಲ್ಲ. ಪಾಕ್ ಧ್ವಜ ಹಾರಿಸಿದ್ದು ಯಾರು ಎಂಬುದು ನಮಗೆ ಗೊತ್ತಿದೆ. ಇಷ್ಟರಲ್ಲೇ ಅವರನ್ನು ನಾವೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸುತ್ತೇವೆ' ಎಂದು ಮುತಾಲಿಕ್ ಗುಡುಗಿದ್ದಾರೆ.

English summary
Six college students, owing allegiance to right wing group Sri Rama Sene, were arrested today for allegedly hoisting Pakistan's flag in Sindhagi, 60 km from here, police SP Rajappa said. But Sri Ram Sene chief Pramod Muthalik denied the allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X