ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಂಗಾರಪ್ಪ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಭಾರದ್ವಾಜ್
ಸಂಜೆ ಸುಮಾರು 5 ಗಂಟೆಗೆ ಪತ್ನಿ ಪ್ರಫುಲ್ಲತಾ ಜತೆ ಭಾರದ್ವಾಜ್ ಅವರು, ಬಂಗಾರಪ್ಪ ಮನೆಗೆ ಭೇಟಿ ನೀಡಿದ್ದರು. ಮನೆಯಲ್ಲಿ ಬಂಗಾರಪ್ಪ ಪತ್ನಿ ಶಕುಂತಲಾ, ಮಗ ಮಧು ಬಂಗಾರಪ್ಪ ಹಾಗೂ ಮೂವರು ಪುತ್ರಿಯರು ಇದ್ದರು. ಎಲ್ಲರಿಗೂ ಭಾರದ್ವಾಜ್ ದಂಪತಿ ಸಾಂತ್ವನ ಹೇಳಿದರು.
'ಬಂಗಾರಪ್ಪ 20 ವರ್ಷಗಳಿಂದ ನನಗೆ ಪರಿಚಿತರಾಗಿದ್ದರು. ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಅವರ ಕಾರ್ಯದಕ್ಷತೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಕಾಂಗ್ರೆಸ್ನಲ್ಲಿ ಇದ್ದಾಗ ಪಕ್ಷದ ಬೆಳವಣಿಗೆಗೆ ಅನನ್ಯ ಕೊಡುಗೆ ನೀಡಿದ್ದಾರೆ. ಇಂಥ ಒಬ್ಬ ಆಡಳಿಗಾರನನ್ನು ಕಳೆದುಕೊಂಡಿರುವುದರಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ' ಎಂದು ಭಾರದ್ವಾಜ್ ಅಭಿಪ್ರಾಯಪಟ್ಟರು.
Comments
ಎಸ್ ಬಂಗಾರಪ್ಪ ಮಧು ಬಂಗಾರಪ್ಪ ರಾಜ್ಯಪಾಲ ಭಾರದ್ವಾಜ್ ಬೆಂಗಳೂರು ಕುಮಾರ ಬಂಗಾರಪ್ಪ ಸೊರಬ ವಿವಾದ ಸಾವು ದೇವರು ಶಂಭೋ ಶಂಕರ ಟಿವಿ9 ಸುವರ್ಣ ಟಿವಿ ಶಿವಮೊಗ್ಗ s bangarappa soraba madhu bangarappa death bjp congress
English summary
Governor Hansraj Bhardwaj visited Bangarappa house in Bangalore on Jan 3 and condoled his death. Madhu Bangarappa, younger son of S Bangarappa along with his mother and sisters were present.
Story first published: Wednesday, January 4, 2012, 12:23 [IST]