ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರಿಗಿಂತ ಮಠಗಳಿಗೆ ಹಣ ನೀಡುವುದೇ ಒಳಿತು: ಸಚಿವ ಅಶೋಕ್

|
Google Oneindia Kannada News

Afzal Guru & Mutt
ಬೆಂಗಳೂರು, ಡಿ 4: ನಮ್ಮ ಸಂಸ್ಕೃತಿಗೆ ಮಾರು ಹೋಗಿ ವಿದೇಶಿಯರು ನಮ್ಮಲ್ಲಿ ಬರುತ್ತಾರೆ. ಉಗ್ರರ ರಕ್ಷಣೆಗೆ ಹಣ ವ್ಯಯಿಸುವ ಬದಲು ಮಠಗಳಿಗೆ ಹಣ ನೀಡುವುದೇ ಸೂಕ್ತ ಎಂದು ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ.

ಮಠಗಳು ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿವೆ. ಉಗ್ರ ಅಫ್ಜಲ್ ಗುರು ಮತ್ತು ಕಸಬ್ ರಕ್ಷಣೆಗೆ ಕೇಂದ್ರ ಸರಕಾರ ಇದುವರೆಗೆ ಮೂವತ್ತು ಕೋಟಿ ರೂಪಾಯಿ ಹಣ ಖರ್ಚು ಮಾಡಿದೆ. ನಾವು ಮಠಗಳಿಗೆ ಇದುವರೆಗೆ ಅರವತ್ತು ಕೋಟಿ ರೂಪಾಯಿ ನೀಡಿದ್ದೇವೆ. ನಾವು ನೀಡುವ ಅನುದಾನಗಳಿಂದ ಮಠಗಳು ಇನ್ನೂ ಹೆಚ್ಚಿನ ಅನ್ನದಾಸೋಹ, ವಿದ್ಯಾದಾನದಲ್ಲಿ ತೊಡಗಲು ಅನುಕೂಲವಾಗುತ್ತದೆ ಎಂದು ಅಶೋಕ್ ಹೇಳಿಕೆ ನೀಡಿದ್ದಾರೆ.

ರಂಭಾಪುರಿ ಶ್ರೀಗಳಿಗೆ ನಮನ ಸಲ್ಲಿಸಿ ಮಾತನಾಡುತ್ತಿದ್ದ ಅಶೋಕ್, ಹೆಚ್ಚಿನ ಮಠಗಳು ಅನ್ನದಾಶೋಹ, ಶೈಕ್ಷಣಿಕ ಸಂಸ್ಥೆ, ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಬುದ್ದಿಜೀವಿಗಳು ನಮ್ಮ ಮೇಲೆ ಆರೋಪ ಮಾಡುವ ಮೊದಲು ಇದನ್ನೆಲ್ಲಾ ಗಮನಿಸಿ ಹೇಳಿಕೆ ನೀಡಲಿ ಎಂದು ಅವರು ಕಿವಿಮಾತು ಹೇಳಿದ್ದಾರೆ.

ವಿದೇಶಿಯರಲ್ಲಿ ಬಹಳಷ್ಟು ಹಣವಿದ್ದರೂ ಅವರಲ್ಲಿ ನೆಮ್ಮದಿವಿರುವುದಿಲ್ಲ. ಮಾನಸಿಕಶಾಂತಿಗಾಗಿ ನಮ್ಮ ದೇಶಕ್ಕೆ ಬರುವ ಇಂತಹ ಪ್ರವಾಸಿಗರಿಗೆ ನಮ್ಮ ಸಂಸ್ಕೃತಿ ಬಗ್ಗೆ ವಿವರವಾಗಿ, ಮನದಟ್ಟು ಮಾಡುವ ಹೇಳುವ ಅವಶ್ಯಕತೆಯಿದೆ. ಹಾಗಾಗಿ ಮಠಗಳಿಗೆ ಹಣ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ.

English summary
Home Minister Ashok justifies government decision towards allocating money to Mutt. He says, it is always better than crores of rupees spending on security for terrorist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X