ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲಿನಂತೆ ಬ್ಯಾಂಕ್‌ ಖಾತೆ ಪೋರ್ಟೆಬಿಲಿಟಿಯೂ ಸಾಧ್ಯ

By Srinath
|
Google Oneindia Kannada News

now-savings-banks-account-number-portability
ಹೊಸದಿಲ್ಲಿ, ಜ.4: ಈಗ ಪೋರ್ಟೆಬಿಲಿಟಿ ಕಾಲ. ಕಳೆದ ವರ್ಷವಷ್ಟೇ ಮೊಬೈಲ್ ಫೋನ್ ಸಂಖ್ಯೆಗಳು ಮತ್ತು ಆರೋಗ್ಯ ವಿಮಾ ಪಾಲಿಸಿಗಳ ಪೋರ್ಟೆಬಿಲಿಟಿ ವ್ಯವಸ್ಥೆ ಜಾರಿಗೆ ಸರಕಾರ ಅವಕಾಶ ನೀಡಿತ್ತು. ಇದೀಗ ಬ್ಯಾಂಕ್‌ಗಳಲ್ಲಿನ ಉಳಿತಾಯ ಖಾತೆ ಸಂಖ್ಯೆಗಳ ಪೋರ್ಟೆಬಿಲಿಟಿ ಸೇವೆಯನ್ನು ಜಾರಿಗೊಳಿಸುವ ಬಗ್ಗೆ ಹಣಕಾಸು ಸಚಿವಾಲಯ ಪರಿಶೀಲನೆ ನಡೆಸುತ್ತಿದೆ.

ಈ ಸೇವೆ ಜಾರಿಯಾದಲ್ಲಿ, ಬ್ಯಾಂಕ್ ಖಾತೆದಾರನು ತನ್ನ ಬ್ಯಾಂಕ್‌ನ್ನು ಬದಲಾಯಿಸಿದರೂ, ತನ್ನ ಮೂಲ ಖಾತೆಯ ಸಂಖ್ಯೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಗಮನಾರ್ಹವೆಂದರೆ ಇಡೀ ಜಗತ್ತಿನಲ್ಲಿ ಆಮೂಲಾಗ್ರವಾಗಿ ಬ್ಯಾಂಕ್‌ ಖಾತೆ ಸಂಖ್ಯೆಗಳ ಪೋರ್ಟೆಬಿಲಿಟಿ ಸೇವೆ ಎಲ್ಲೂ ಇಲ್ಲ. ಸ್ವೀಡನ್ ನಲ್ಲಿ ಮಾತ್ರ ಇದು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ.

'ಉಳಿತಾಯ ಖಾತೆ ಸಂಖ್ಯೆಗಳ ಪೋರ್ಟೆಬಿಲಿಟಿ ವ್ಯವಸ್ಥೆ ಜಾರಿಗೊಳಿಸಲು ಕೆಲವೊಂದು ತಾಂತ್ರಿಕ ಸಮಸ್ಯೆಗಳಿವೆ. KYC ಮತ್ತು ಕೋರ್ ಬ್ಯಾಂಕಿಂಗ್ ಸೊಲ್ಯುಶನ್ಸ್ (CBS) ವ್ಯವಸ್ಥೆಯಡಿ ಅವುಗಳನ್ನು ಗುರುತಿಸಿದ್ದೇವೆ. ಶೀಘ್ರದಲ್ಲೇ ಅವುಗಳನ್ನು ನಿವಾರಿಸಿಕೊಳ್ಳಲಿದ್ದೇವೆ' ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ಡಿ.ಕೆ. ಮಿತ್ತಲ್ ಹೇಳಿದ್ದಾರೆ.

ಈ ಸೌಲಭ್ಯದಿಂದಾಗಿ ಗ್ರಾಹಕರು ಪದೇ ಪದೇ ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ ಪ್ರಕ್ರಿಯೆಗೆ ಗುರಿಯಾಗದೆ ಬ್ಯಾಂಕ್‌ಗಳನ್ನು ಬದಲಾಯಿಸಿಕೊಳ್ಳುವ ಅವಕಾಶ ಸಿಗುತ್ತದೆ.

English summary
The government is working on savings banks account number portability. But the banks have to work on identification code, know your customers (KYC) norms and core banking solution ( CBS) for implementing the savings bank account number portability.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X