ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಮೇಲಿನ ಸಿಟ್ಟು ಮಗನ ಮೇಲೆ: ಗುರು ರಾಘವೇಂದ್ರ

By Srinath
|
Google Oneindia Kannada News

eswarappa-shows-anger-over-raghavendra-instead-of-bsy
ಶಿವಮೊಗ್ಗ, ಜ.3: ನನ್ನನ್ನು ಜೈಲಿಗೆ ಕಳಿಸಿದ್ದು ಆ ಈಶ್ವರಪ್ಪಾನೇ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದ್ದೇ ತಡ ಯಡಿಯೂರಪ್ನೋರ ಬಗ್ಗೆ ಮುನಿಸಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಕೆಎಸ್ ಈಶ್ವರಪ್ಪ ಅಬವರು ಇದೀಗ ಆ ಸಿಟ್ಟನ್ನು ಯಡಿಯೂರಪ್ನೋರ ಪುತ್ರ, ಸಂಸದ ಬಿವೈ ರಾಘವೇಂದ್ರ ಅವರಿಂದಲೂ ವಿಮುಖಗೊಂಡಿದ್ದಾರೆ.

ಸಂದರ್ಭ: ನಗರದ ಬಾಲರಾಜ ಅರಸು ರಸ್ತೆಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಹಕಾರ ಸಂಘ ನಿಯಮಿತದ ಹೆಚ್ಚುವರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ. ವೇದಿಕೆಗೆ ತಡವಾಗಿ ಆಗಮಿಸಿದ ರಾಘವೇಂದ್ರ, ವೇದಿಕೆಯ ಮೇಲೆ ಆಸೀನರಾಗಿದ್ದ ಈಶ್ವರಪ್ಪನವರಿಗೆ 'ನಮಸ್ಕಾರ ಸಾರ್' ಎಂದರೂ ಅವರತ್ತ ತಿರುಗಿಯೂ ನೋಡದ ಈಶ್ವರಪ್ಪ, ಸೆಟಗೊಂಡೇ ಕುಂತಿದ್ದರು. ಇದಕ್ಕೆ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್‌ ಸಾಕ್ಷೀಭೂತರಾದರು.

ಕುತೂಹಲದ ಸಂಗತಿಯೆಂದರೆ ಸಮಾರಂಭ ಉದ್ಘಾಟನೆ ಮಾಡಿದ ನಂತರ, ಈಶ್ವರಪ್ಪ ಎಲ್ಲಿಯೂ ರಾಘವೇಂದ್ರರ ಹೆಸರು ಹೇಳಲಿಲ್ಲ. ಇದರಿಂದ ರಾಘವೇಂದ್ರ ಮುಜುಗರಕ್ಕೀಡಾದಂತೆ ಕಂಡು ಬಂದಿತು. ಆದರೆ 'ಈಶ್ವರಪ್ಪನವರಿಗೆ ನಾನು ಮಗನಿದ್ದಂತೆ. ಇದರಿಂದ ಯಾವುದೇ ಬೇಸರವಾಗಿಲ್ಲ' ಎಂದು ರಾಘವೇಂದ್ರ ಸಮಾರಂಭದ ಬಳಿಕ ಹೇಳಿದ್ದು ವಿಶೇಷವಾಗಿತ್ತು.

ಇದನ್ನೆಲ್ಲ ಗಮನಿಸುತ್ತಿದ್ದ ಸಭಿಕರು 'ಈಶ್ವರಪ್ನೋರು ಯಡಿಯೂರಪ್ಪ ಮೇಲಿನ ಸಿಟ್ಟನ್ನು ಪರೋಕ್ಷವಾಗಿ ಅವರ ಪುತ್ರ ರಾಘವೇಂದ್ರರ ಮೇಲೆ ವ್ಯಕ್ತಪಡಿಸಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು.

ಬಳಿಕ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್‌ ಭಾಷಣ ಮಾಡುವವರೆಗೂ ವೇದಿಕೆಯಲ್ಲಿದ್ದರು. ಸಂಸದ ರಾಘವೇಂದ್ರ ಭಾಷಣಕ್ಕೆ ತೆರಳುತ್ತಿದ್ದಂತೆ ಈಶ್ವರಪ್ಪ ವೇದಿಕೆಯಿಂದ ನಿರ್ಗಮಿಸಿದರು. ರಾಘವೇಂದ್ರ ಹಾಗೂ ಈಶ್ವರಪ್ಪ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡದೇ ಹಾಗೂ ಒಬ್ಬರ ಮುಖವನ್ನು ಇ
ನ್ನೊಬ್ಬರು ನೋಡದೇ ಹೋದರು.

English summary
Karnataka BJP leadership: KS Eswarappa shows anger over by BY Raghavendra instead of BS Yeddyurappa at Shimoga on Jan 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X