ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರಿಸುವ ಬಟ್ಟೆ ಬಗ್ಗೆ ಮಹಿಳೆಯರಿಗೆ ನಿಗಾ ಇರಬೇಕು

By Prasad
|
Google Oneindia Kannada News

CC Patil
ಹುಬ್ಬಳ್ಳಿ, ಜ. 2 : "ವೈಯಕ್ತಿಕವಾಗಿ ನಾನು ಮಹಿಳೆಯರು ಪ್ರಚೋದನಾತ್ಮಕವಾಗಿ ಬಟ್ಟೆ ಧರಿಸುವುದನ್ನು ಪ್ರೋತ್ಸಾಹಿಸುವುದಿಲ್ಲ. ಯಾವಾಗಲೂ ಮಹಿಳೆಯರು ಗೌರವಯುತವಾಗಿ ಉಡುಪು ಧರಿಸಬೇಕು" ಎಂದು ಹೇಳಿರುವ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಸಿಸಿ ಪಾಟೀಲ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಅವರು ಧರಿಸುವ ಪ್ರಚೋದನಾತ್ಮಕ ಬಟ್ಟೆಗಳೇ ಕಾರಣ ಎಂದು ಆಂಧ್ರದ ಪೊಲೀಸ್ ಮಹಾನಿರ್ದೇಶಕ ದಿನೇಶ್ ರೆಡ್ಡಿ ನೀಡಿದ ಹೇಳಿಕೆಯನ್ನು ಹುಬ್ಬಳ್ಳಿಯಲ್ಲಿ ಭಾನುವಾರ ಸಿಸಿ ಪಾಟೀಲ್ ಪ್ರತಿಧ್ವನಿಸಿದರು.

ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಅನೇಕರು ಸಾಫ್ಟ್ ವೇರ್ ಕಂಪನಿಗಳಲ್ಲಿ, ಕಾಲ್ ಸೆಂಟರ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಪಾಳಿಯೂ ಕೆಲಸ ಮಾಡಬೇಕಾಗಿ ಬರುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರು ತಾವು ಧರಿಸುವ ಉಡುಪಿನ ಬಗ್ಗೆ ಸದಾ ಎಚ್ಚರದಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.

ಮಹಿಳೆಯರು ಇಂತಹದೇ ಬಟ್ಟೆ ಧರಿಸಬೇಕೆಂದು ನಾನೇನು ಶಿಫಾರಸು ಮಾಡುವುದಿಲ್ಲ, ಕೆಲವರು ಸೀರೆ ಧರಿಸುವುದನ್ನು ಇಷ್ಟಪಡುತ್ತಾರೆ, ಕೆಲವರು ಸೆಲ್ವಾರ್ ಕಮೀಜ್ ಧರಿಸುತ್ತಾರೆ, ಕೆಲವರು ಪಾಶ್ಚಿಮಾತ್ಯ ದಿರಿಸಿಗೆ ಮಾರಿಹೋಗಿದ್ದಾರೆ. ಆದರೆ ಕೆಲಸದಲ್ಲಿರುವ ಮಹಿಳೆಯರು ಮೈಯನ್ನು ಎಷ್ಟು ಮುಚ್ಚಿಕೊಳ್ಳಬೇಕೆಂದು ಅವರೇ ನಿರ್ಧರಿಸಲಿ. ಆಗ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯವನ್ನು ತಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

English summary
Karnataka's women and child welfare minister C C Patil feels women should know what they wear. They should know how much body they have to cover. He was speaking in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X