ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರಪ್ಪ ಮೇಲಿನ ಭಕ್ತಿ, ಗೌರವ ಈಗೇಕೆ ಕುಮಾರ?

By Srinath
|
Google Oneindia Kannada News

bangarappa-last-rites-who-is-at-fault-madhu-kumar
ಬೆಂಗಳೂರು, ಡಿ. 30: ಬಂಗಾರಪ್ಪ ಅಂತ್ಯಕ್ರಿಯೆ ರಂಪಾಟವನ್ನು ಟಿವಿ ಚಾನಲುಗಳಲ್ಲಿ ವೀಕ್ಷಿಸಿದ ನಾಡಿನ ಜನ ಮಧುಚಂದ್ರ ಬಂಗಾರಪ್ಪ ಮಾಡಿದ್ದು ಸರೀನಾ ಅಥವಾ ವಸಂತ ಕುಮಾರ ಬಂಗಾರಪ್ಪ ಮಾಡಿದ್ದು ತಪ್ಪಾ ಎಂದು ಧನುರ್ಮಾಸದ ಚಳಿಯಲ್ಲಿ ಬಿಸಿಬಿಸಿ ಚರ್ಚೆ ನಡೆಸಿದ್ದಾರೆ.

ಈ ಮಧ್ಯೆ, ಬಂಗಾರಪ್ಪನವರ ಹಿರಿಯ ಪುತ್ರನಾಗಿ ಅವರ ಸಮಾಧಿ ಪೂಜೆ ಮಾಡಲು ಕುಟುಂಬದವರು ನನಗೆ ಅವಕಾಶ ನೀಡಲಿಲ್ಲ ಎಂದು ವಸಂತ ಕುಮಾರ ಬಂಗಾರಪ್ಪ ಕ್ರೋಧಗೊಂಡು ರಂಪ ರಾಮಾಯಣ ಮಾಡಿರುವುದರ ಬಗ್ಗೆ ಬೀದಿ ಜಗಳ ಕಾಯದೆ ಟಿವಿ9 ಮತ್ತು ಸುವರ್ಣ ನ್ಯೂಸ್ ವಾಹಿನಿಗಳಲ್ಲಿ ಮಧುಚಂದ್ರ ಬಂಗಾರಪ್ಪ ನಿಜಕ್ಕೂ ಪ್ರಬುದ್ಧರಾಗಿ ಉತ್ತರ ನೀಡಿದ್ದಾರೆ.

ಬಂಗಾರಪ್ಪ ಕುಟುಂಬದ ಜತೆ ಸಂಬಂಧ ಕಡಿದುಕೊಂಡು ದೂರವಾದ ನಂತರ 10 ವರ್ಷಗಳಲ್ಲಿ ವಸಂತ ಕುಮಾರ ಬಂಗಾರಪ್ಪ ಏನೆಲ್ಲ ಮಾಡಿದರು ಎಂಬುದನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಈ 10 ವರ್ಷಗಳಲ್ಲಿ ಕುಟುಂಬದಿಂದ ದೂರವಾದ ವಸಂತನನ್ನು ಮತ್ತೆ ಒಂದುಗೂಡಿಸಲು ಮಾಮಾ (ಬಂಗಾರಪ್ಪ ಅವರನ್ನು ಕುಟುಂಬದವರು ಪ್ರೀತಿಯಿಂದ ಕರೆಯುವುದು ಹೀಗೇ) ಅನೇಕ ಬಾರಿ ಯತ್ನಿಸಿ, ಸೋತರು. ವಸಂತ ಮರಳಿ ಬರಲೇ ಇಲ್ಲ.

ಬದಲಿಗೆ ಇನ್ನಷ್ಟು ದೂರವಾಗುತ್ತಾ ಸಾಗಿದ. ಜತೆಗೆ ಮಾನಸಿಕವಾಗಿಯೂ ಸಾಕಷ್ಟು ಕಿರಿಕಿರಿ ಮಾಡಿದ. ಆಗಿಲ್ಲದ ಅಪ್ಪನ ಮೇಲಿನ ಭಕ್ತಿ, ಗೌರವಗಳು ಈಗ ಅವರ ಮರಣದ ನಂತರ ಏಕೆ. ಇದೆಲ್ಲ ಕುಮಾರನ ಬೂಟಾಟಿಕೆ ಎಂದು ಮಧು ಅಣ್ಣನಿಗೆ ಜಾಡಿಸಿದ್ದಾರೆ. (ಮುಂದೆ ಓದಿ ...)

English summary
When Kumar Bangarappa, elder son of S Bangarappa came to perform last rites at cremation site it was reported that he was not allowed to do samadhi pooja by his younger brother Madhu Bangarappa. As an aftermath of this controversy Madhu has spoke to TV Channels indetail about the controversy. So who is at fault!?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X