• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೊದೆ ಮರೆಯಲ್ಲಿ ಚುಂಬನ: ವಿದ್ಯಾರ್ಥಿಗೆ ಬಿತ್ತು ಧರ್ಮದೇಟು

By Srinath
|

ಪುತ್ತೂರು, ಡಿ.29: ವಿದ್ಯಾರ್ಥಿ ದೆಸೆಯಲ್ಲೇ ಹಸಿಬಿಸಿ ಕಾಮದಾಟ, ರೋಮಾನ್ಸ್ ಇತ್ತೀಚಿನ ದಿನಗಳಲ್ಲಿ ಮಿತಿಮೀರಿದೆ. ಇಲ್ಲಿನ ಕುಂಬ್ರ ಕಾಲೇಜಿನಲ್ಲೂ ಇಂತಹುದೇ ಘಟನೆ ಕಳೆದ ವಾರ ನಡೆದಿದೆ. ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ ಮಹಾಶಯನೊಬ್ಬ ಅನ್ಯ ಕೋಮಿನ ಹುಡುಗಿಗೆ ಜುಂಬಿಸಿ, ಸ್ಥಳೀಯರಿಂದ ಧರ್ಮದೇಟು ತಿಂದು ಫಜೀತಿಗಿಟ್ಟುಕೊಂಡಿದ್ದಾನೆ.

ಸದರಿ ವಿದ್ಯಾರ್ಥಿ ಜೋಡಿ, ಕಳೆದ ಶನಿವಾರ ಕಾಲೇಜು ಬಳಿಯಿರುವ ಪೊದೆ ಮರೆಯಲ್ಲಿ ಸೇರಿಕೊಂಡು ಚುಂಬಿಸುತ್ತಿದ್ದರು. ಇದನ್ನು ಕದ್ದು ನೋಡಿದ ಇತರೆ ವಿದ್ಯಾರ್ಥಿಗಳು, ವಿಷಯವನ್ನು ಸ್ಥಳೀಯರಿಗೆ ಕಿವಿಗೆ ಹಾಕಿದ್ದಾರೆ. ಈ ಮಧ್ಯೆ, ಇದರ ಸುಳಿವರಿತ ಜೋಡಿ, ಸ್ಥಳೀಯರು ಅಲ್ಲಿಗೆ ಬರುವಷ್ಟರಲ್ಲಿ ಪರಾರಿಯಾಗಿದ್ದರು.

ಆದರೆ ಪಟ್ಟು ಬಿಡದ ಸ್ಥಳೀಯರು, ಮಾರನೆಯ ದಿನ 'ಕಿಸ್ಸಿಂಗ್ ಹೀರೊ' ವಿದ್ಯಾರ್ಥಿ ಕಾಲೇಜಿಗೆ ಬರುವುದನ್ನೇ ಕಾಯುತ್ತಿದ್ದರು. ಇಲ್ಲಿನ ಕುಂಬ್ರ ಜಂಕ್ಷನ್ ಬಳಿ ಬರುತ್ತಿದ್ದಂತೆ ಅವನಿಗೆ ಧರ್ಮದೇಟು ನೀಡಿದ್ದಾರೆ. ಈತನಿಗೆ ಆ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಟ್ಟಿದ್ದ ಬ್ರೋಕರ್ ವಿದ್ಯಾರ್ಥಿಗೂ ಧರ್ಮದೇಟು ಬಿದ್ದಿದೆ.

ಏಟು ತಿಂದ ವಿದ್ಯಾರ್ಥಿಗಳು ಅಲ್ಲಿಂದ ಕಾಲ್ಕಿತ್ತವರು ಕಾಲೇಜು ಸಮೀಪದಲ್ಲೆಲ್ಲೊ ಕಾಣಿಸಿಕೊಂಡಿಲ್ಲ. ಈ ಜೊಡಿಯ ಕಿಸ್ಸಿಂಗ್ ಪ್ರಕರಣ ವಿದ್ಯಾರ್ಥಿನಿಯ ಮನೆಯವರಿಗೂ ಗೊತ್ತಾಗಿ ಅವರು ತಮ್ಮ ಮಗಳನ್ನು ಕಾಲೇಜಿಗೆ ಕಳುಹಿಸುವುದನ್ನು ನಿಲ್ಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two PUC students in the pre univercity college in Kumbra in Puttur engage in kissing and the boy was beaten by elders of the town. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more