ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆಕ್ ಮತ್ತು ಡ್ರಾಫ್ಟುಗಳ ಆಯಸ್ಸು ಮೂರೇ ತಿಂಗಳು

|
Google Oneindia Kannada News

RBI
ಮುಂಬೈ, ಡಿ 29: ಮುಂದಿನ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 1, 2012 ರಿಂದ ಅನ್ವಯವಾಗುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚೆಕ್ ಗಳ ಅವಧಿಯನ್ನು ಆರು ತಿಂಗಳಿನಿಂದ ಮೂರು ತಿಂಗಳಿಗೆ ಇಳಿಸಿ ಆದೇಶ ಹೊರಡಿಸಿದೆ.

CTS 2010 ( ಚೆಕ್ ಟ್ರ್ಯಾನ್ಜಾಕ್ಶನ್ ಸಿಸ್ಟಂ) ಮಾನದಂಡವನ್ನು ಪಾಲಿಸುವಂತೆ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಿಗೆ (ಖಾಸಾಗಿ ಬ್ಯಾಂಕ್ ಸಹಿತ) ಆದೇಶ ನೀಡಿದೆ. ರಿಸರ್ವ್ ಬ್ಯಾಂಕ್ ತೆಗೆದುಕೊಂಡಿರುವ ಈ ನಿರ್ಧಾರವನ್ನು ರಾಜ್ಯಸಭೆಯಲ್ಲಿ ಕೇಂದ್ರ ರಾಜ್ಯ ಹಣಕಾಸು ಸಚಿವ ನಮೋ ನಾರಿಯನ್ ಮೀನಾ ಪ್ರಕಟಿಸಿದ್ದಾರೆ.

ಮೂರು ತಿಂಗಳ ನಂತರ ಪ್ರೆಸೆಂಟ್ ಮಾಡುವ ಯಾವುದೇ ಚೆಕ್, ಡ್ರಾಫ್ಟ್, ಬ್ಯಾಂಕರ್ಸ್ ಚೆಕ್, ಪೇ ಆರ್ಡರ್ ಗಳನ್ನೂ ಮಾನ್ಯ ಮಾಡದಂತೆ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಿಗೆ ನೀಡಿದ ಅಧಿಸೂಚನೆಯಲ್ಲಿ ತಿಳಿಸಿದೆ.

CEIB ( ಸೆಂಟ್ರಲ್ ಇಕನಾಮಿಕ್ ಇಂಟೆಲಿಜೆನ್ಸ್ ಬ್ಯುರೋ ) ಚೆಕ್, ಡ್ರಾಫ್ಟ್ ಗಳಲ್ಲಿ ನಡೆಯುವ ಮೋಸಗಳನ್ನು ತಡೆಗಟ್ಟುವ ಉದ್ದೇಶದಿಂದ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಈ ಶಿಫಾರಸನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮುಂದಿಟ್ಟಿತ್ತು.

English summary
Reserve Bank of India has reduced the validity of cheques sand bank drafts from the present six months to three months beginning next fiscal. Minister of State for Finance Namo Narain Meena said in a written reply to the Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X