ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6534 ಕೋಟಿ ರು ಆದಾಯ ತೆಗೆದ ಸಚಿವ ರೇಣುಕಾ

By Mahesh
|
Google Oneindia Kannada News

Renukacharya
ಬೆಂಗಳೂರು, ಡಿ.29: ಪ್ರಸಕ್ತ ವರ್ಷ ಅಬಕಾರಿ ಇಲಾಖೆ ಭರ್ಜರಿ ಲಾಭ ಗಳಿಸಿದೆ ಎಂದು ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ. ಇಲಾಖೆ ಪ್ರಸಕ್ತ ವರ್ಷ 6534 ಕೋಟಿ ಆದಾಯ ಗಳಿಸಿದೆ.

ಕಳೆದ ವರ್ಷ ಇದೇ ಆವಧಿಯಲ್ಲಿ 5523 ಕೋಟಿ ರು ಆದಾಯ ಸಂಗ್ರಹಿಸಿತ್ತು. ಮುಂದಿನ ಆರ್ಥಿಕ ವರ್ಷದಲ್ಲಿ ಸುಮಾರು 10,000 ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಶೇ.71 ರಷ್ಟು ಪ್ರಗತಿ ಸಾಧಿಸಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದರು.

ವರ್ಷದ ಆರಂಭದಲ್ಲಿ ರಾಜ್ಯದಲ್ಲಿ 875 ಕಳ್ಳಭಟ್ಟಿ ಕೇಂದ್ರಗಳಿತ್ತು. ನಿರಂತರ ದಾಳಿ ನಡೆಸಿ ಸುಮಾರು 400 ಕಳ್ಳಭಟ್ಟಿ ಕೇಂದ್ರಗಳನ್ನು ನಾಶ ಮಾಡಲಾಗಿದೆ. ಉಳಿದ ಕೇಂದ್ರಗಳ ಮೇಲೆ ದಾಳಿ ನಡೆಸಲಾಗುವುದು.

ಸುಮಾರು 11 ಜಿಲ್ಲೆಗಳನ್ನು ಈಗ ಕಳ್ಳಭಟ್ಟಿ ಮುಕ್ತ ಜಿಲ್ಲೆಗಳಾಗಿ ಪರಿವರ್ತಿಸಲಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.

English summary
Karnataka Excise Department has earned revenue of about Rs 6534 Cr from financial year 2011. Now department aims to reach Rs 10,000 Cr mark said minister Renukacharya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X