ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಯೋಗ ಪ್ರದರ್ಶನಕ್ಕೆ ಹೇಮಮಾಲಿನಿ

By Mahesh
|
Google Oneindia Kannada News

ಬೆಂಗಳೂರು, ಡಿ.28: ಸುಮಾರು 30 ದೇಶಗಳ 5,000ಕ್ಕೂ ಅಧಿಕ ಪ್ರತಿನಿಧಿಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಯೋಗ, ನ್ಯಾಚುರೋಪತಿ ಮತ್ತು ಆರೋಗ್ಯ ಸಮಾವೇಶ ಫೆ.9, 2012ರಲ್ಲಿ ನಡೆಯಲಿದೆ.

ಸುಮಾರು 4 ಕೋಟೀ ವೆಚ್ಚದ ಈ ಪ್ರದರ್ಶನ ಮತ್ತು ಸಮಾವೇಶಕ್ಕೆ ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಸಹಯೋಗ ಕೂಡಾ ಸಿಕ್ಕಿದೆ. ಕರ್ನಾಟಕ ಸರ್ಕಾರ ಸುಮಾರು 2 ಕೋಟಿ ರು ಹಾಗೂ ಕೇಂದ್ರ ಸರ್ಕಾರ 85 ಲಕ್ಷರೂ ನೀಡಿದ್ದು, ಉಳಿದಿದ್ದು ಪ್ರಾಯೋಜಕರಿಂದ ಪಡೆಯಲಾಗಿದೆ ಎಂದು ವೈದ್ಯಕೀಯ ಖಾತೆ ಸಚಿವ ಎಸ್ ಎ ರಾಮದಾಸ್ ಹೇಳಿದ್ದಾರೆ.

ಅಮೆರಿಕ, ಚೀನಾ, ಹಾಂಗ್ ಕಾಂಗ್, ಥೈಲ್ಯಾಂಡ್, ಮಲೇಶಿಯಾ, ಸಿಂಗಪುರ ದೇಶಗಳಿಂದ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. ಸುಮಾರು 300 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿರುತ್ತದೆ.

ಸುಮಾರು 500ಕ್ಕೂ ಅಧಿಕ ಪ್ರತಿನಿಧಿಗಳು ತಮ್ಮ ವಾದ ಮಂಡಿಸಲಿದ್ದಾರೆ, ಯೋಗ ಹಾಗೂ ನ್ಯಾಚುರೋಪತಿ ಬಗ್ಗೆ ಉಪನ್ಯಾಸಗಳು ನಡೆಯಲಿದೆ. ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ನಟಿ, ರಾಜ್ಯ ಸಭಾ ಸದಸ್ಯೆ ಹೇಮಮಾಲಿನಿ ಸೇರಿದಂತೆ ಹಲವು ಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
More than 5,000 delegates from 30 countries will participate in the inaugural five day International Conference on Yoga, Naturopathy and Arogya Expo-2012 in the city from February 9, 2012 .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X