ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿ ಎಲ್ ಸಿಡಿ ಖರೀದಿಗೆ ಮುಂದಾದ ಸ್ಯಾಮ್‌ಸಂಗ್

By Mahesh
|
Google Oneindia Kannada News

Samsung Sony JV
ಬೆಂಗಳೂರು, ಡಿ.27: ವಿಶ್ವದ ನಂ.1 ಟಿವಿ ನಿರ್ಮಾಣ ಸಂಸ್ಥೆ ಸ್ಯಾಮ್‌ಸಂಗ್ ಈಗ ಭರ್ಜರಿ ಡೀಲ್ ಕುದುರಿಸಿದೆ. ಜನಪ್ರಿಯ ಬ್ರ್ಯಾಂಡ್ ಸೋನಿ ಕಂಪನಿಯ ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ(LCD) ಘಟಕದ ಪೂರ್ಣ ಷೇರುಗಳನ್ನು ಸ್ಯಾಮ್‌ಸಂಗ್ ಖರೀದಿಸಲಿದೆ. ಈ ಬೃಹತ್ ಒಪ್ಪಂದ ಮೊತ್ತ ಸುಮಾರು 1.08 ಟ್ರಿಲಿಯನ್(935 ಮಿಲಿಯನ್ ಡಾಲರ್) ಎನ್ನಲಾಗಿದೆ.

ಒಪ್ಪಂದದ ನಂತರ ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಹಾಗೂ ಜಪಾನ್ ಮೂಲದ ಸೋನಿ ಕಾರ್ಪೋರೇಷನ್ ಜಂಟಿ ಯೋಜನೆಯಡಿಯಲ್ಲಿ ಟಿವಿ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ಎಲ್ ಸಿಡಿ ತಯಾರಿಸಲಿದೆ.

ಎಲ್ ಸಿಡಿ ಘಟಕದಲ್ಲಿ ಸೋನಿ ಸಂಸ್ಥೆ ಶೇ.50 ರಷ್ಟು ಪಾಲು ಹೊಂದಿದ್ದು, 2004ರಲ್ಲಿ ಆರಂಭವಾದ ಈ ಜಂಟಿ ಯೋಜನೆ ಘಟಕ ಏಳಿಗೆ ಕಂಡಿರಲಿಲ್ಲ.
ನವೆಂಬರ್ ತಿಂಗಳಿನಲ್ಲೂ ಕೂಡಾ ಸೋನಿ ಸಂಸ್ಥೆ ನಷ್ಟ ಅನುಭವಿಸಿತ್ತು. ಸತತ ನಾಲ್ಕು ವರ್ಷಗಳಿಂದ ನಷ್ಟದಲ್ಲಿದ್ದ ಟಿವಿ ಘಟಕ 2.2 ಬಿಲಿಯನ್ ಡಾಲರ್ ನಷ್ಟು ನಷ್ಟ ಅನುಭವಿಸಿತ್ತು.

ಎಲ್ ಸಿಡಿ ಘಟಕದ ಪುನರುತ್ಥಾನ ಕಾರ್ಯದಲ್ಲಿ ವಿಫಲವಾದ ಜಪಾನಿನ ಟಿವಿ ದಿಗ್ಗಜ ಸೋನಿ, ಈಗ ಸ್ಯಾಮ್ ಸಂಗ್ ಜೊತೆ ಕೈ ಜೋಡಿಸಿದೆ. ಸುದ್ದಿ ಹಬ್ಬಿದ್ದಂತೆ ಸೋನಿ ಷೇರುಗಳು ಮೇಲಕ್ಕೇರಿದೆ.

ಸ್ಯಾಮ್ ಸಂಗ್ ವಿಶ್ವದ ನಂ.1 ಟಿವಿ ನಿರ್ಮಾಣ ಸಂಸ್ಥೆಯಾಗಿ ಮುಂದುವರೆದಿದೆ. ದಕ್ಷಿಣ ಕೊರಿಯಾದ ಎಲ್ ಜಿ ಎಲೆಕ್ಟ್ರಾನಿಕ್ಸ್ ಕಂಪನಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದು, ಸೋನಿ ಮೂರನೇ ಸ್ಥಾನದಲ್ಲಿ ಕಷ್ಟನಷ್ಟ ಅನುಭವಿಸುತ್ತಿದೆ.

English summary
Samsung Electronics is all set to buy Sony's entire LCD venture for 1.08 trillion. Sony in November fourth straight year of losses in TV division. Samsung is the world's No. 1 TV maker, while Sony battles for the No.2 title with South Korea's LG Electronics Inc
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X