ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಹಕ್ಕಿಗಳಿಗಾಗಿ ಅಮೆರಿಕದ ನ್ಯೂಡ್ ಟೂರಿಸಂ

By Prasad
|
Google Oneindia Kannada News

Eurobird Toursim in USA for Clothing-free community
ವರ್ಷಾಂತ್ಯ ಹತ್ತಿರವಾಗಿದೆ. ಹೊಸವರ್ಷದ ಹನ್ನೆರಡು ಗಂಟೆ ಬಾರಿಸಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ವಿಶ್ವದಾದ್ಯಂತ ಜನರೆಲ್ಲ ಸಂಸಾರ ಸಮೇತರಾಗಿ ರಜಾದಿನಗಳನ್ನು ಹಿತವಾದ ತಾಣಗಳಲ್ಲಿ ಕಳೆಯಲು ಗಂಟುಮೂಟೆ ಕಟ್ಟಿಕೊಳ್ಳುತ್ತಿದ್ದಾರೆ. ಆದರೆ, ಈ ವಿಶಿಷ್ಟ ತಾಣದಲ್ಲಿ ಗಂಟುಮೂಟೆ ಇರಲಿ, ಅಸಲಿಗೆ ಅಂಗಿ ಚಡ್ಡಿಯೂ ಅತ್ತಾಗಿರಲಿ, ಒಳಉಡುಪುಗಳೂ ಬೇಕಾಗಿಲ್ಲ.

ಹೌದು, ಇದು ಮೈಮೇಲೆ ಕನಿಷ್ಟ ಬಟ್ಟೆ ತೊಟ್ಟರೂ ಕಿರಿಕಿರಿಗೆ ತುತ್ತಾಗುವ ಅರ್ಥಾತ್ ಬಟ್ಟೆ ಅಲರ್ಜಿಯಿರುವ ಪ್ರವಾಸಿಗರನ್ನು ಸೆಳೆಯಲು ನ್ಯೂಡಿಸ್ಟ್ ರೆಸಾರ್ಟ್ ಗಳು ಹೆಚ್ಚಾಗಿರುವ ಅಮೆರಿಕದ ಫ್ಲಾರಿಡಾದ ಕೌಂಟಿಯೊಂದು ಹೊಸ ಪ್ಲಾನ್ ಹಾಕಿಕೊಂಡಿದೆ. ಅದು ನ್ಯೂಡ್ ಟೂರಿಸಂ. ಬೆತ್ತಲೆ ಸ್ಥಿತಿಯನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುವ ಯುರೋಪಿಯನ್ ಪ್ರವಾಸಿಗರನ್ನು ಸೆಳೆಯಲು 'ಯುರೋಬರ್ಡ್' ಎಂಬ ಸಖತ್ ಯೋಜನೆಗೆ ಚಾಲನೆ ನೀಡಿದೆ.

ಆರ್ಥಿಕ ಬಿಕ್ಕಟ್ಟಿನಿಂದ ಥರಗುಟ್ಟುತ್ತಿರುವ ಅಮೆರಿಕಕ್ಕೆ ಇಂಥ ವಿಭಿನ್ನ ಯೋಜನೆಗಳನ್ನು ಹಾಕಿಕೊಳ್ಳುವ ಅಗತ್ಯವೂ ಇದೆ. ಫ್ಲಾರಿಡಾದ ಪಶ್ಚಿಮ ಕರಾವಳಿಯಲ್ಲಿರುವ ಟಾಂಪಾದ ಉತ್ತರ ಭಾಗದಲ್ಲಿದೆ ಈ ಪಾಸ್ಕೋ ಕೌಂಟಿ ಯುರೋಪಿನ ಬೆತ್ತಲೆ ಪ್ರವಾಸಿಗರಿಗೆ ಆಹ್ವಾನ ನೀಡಿದೆ. ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ ಮತ್ತು ಬ್ರಿಟನ್‌ಗಳಿಂದ ಗಂಡ, ಹೆಂಡತಿ, ಮಕ್ಕಳು ಮರಿಗಳು, ಅತ್ತೆ, ಮಾವ, ಸ್ನೇಹಿತರು, ಬಂಧುಗಳಾದಿಯಾಗಿ ಎಲ್ಲರೂ ಬರುತ್ತಾರೆ ಎಂದು ಆಶಿಸಿದ್ದಾರೆ. ಯುರೋಬರ್ಡ್ ಯೋಜನೆಗೆ ನಗರದ ಆಯುಕ್ತರು 4-1 ಮತಗಳಿಂದ ಅನುಮೋದನೆ ನೀಡಿದ್ದು, ಇದರ ಪ್ರಚಾರಕ್ಕಾಗಿ 3,818 ಡಾಲರ್ ಅನುದಾನ ದೊರೆತಿದೆ.

ಅಲ್ಲಿಂದ ಇಲ್ಲಿಗೆ ಬರುವವರೆಗೆ ಹೇಗಾದರೂ ಬರಲಿ, ಆದರೆ ಇಲ್ಲಿ ಬಂದ ಮೇಲೆ ಬಟ್ಟೆ ಧರಿಸುವುದು ಮಾತ್ರ ಸಾಧ್ಯವಿಲ್ಲ. ಎಲ್ಲ ಮುಚ್ಚುಮರೆಗಳನ್ನು ಅವರವರ ಊರಲ್ಲೇ ಬಿಚ್ಚಿಟ್ಟು ಎಷ್ಟು ಸಹಜವಾಗುತ್ತದೋ ಅಷ್ಟು ಸಹಜವಾಗಿ ಇಲ್ಲಿ ರಜಾದಿನಗಳ ಮಜಾ ಅನುಭವಿಸಬಹುದು. ನೂರಕ್ಕೆ ನೂರರಷ್ಟು ಈ ಟೂರಿಸಂ ಯಶಸ್ವಿಯಾಗುತ್ತದೆ ಎಂದು ಕೌಂಟಿಯವರು ನಂಬಿದ್ದಾರೆ.

English summary
American county has planned to attract european tourists who hate to wear cloths or who love cloth-free environment. Pasco county situated on Florida's west coast. People from France, Germay, Netherlands, Britain are expected to arrive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X