ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ ಪಾಕ್ ಯುದ್ಧದಿಂದ ಓಡಿಹೋದ ಹೇಡಿ ಸೈನಿಕ

By Srinath
|
Google Oneindia Kannada News

digvijaya-singh-tweets-again-against-anna-hazare
ನವದೆಹಲಿ‌, ಡಿ.26: ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಂದು ಈಗ ಚಾಲ್ತಿಗೆ ಬಂದಿದ್ದಾರೆ. ಆದರೆ ಅಣ್ಣಾ 1965ರ ಭಾರತ-ಪಾಕ್ ಸಮರದಲ್ಲಿ ತಲೆಮರೆಸಿಕೊಂಡಿದ್ದ ಹೇಡಿ ಸೈನಿಕ ಹಾಗೂ ಅವರೊಬ್ಬ ಆರ್ಎಸ್ಎಸ್ ಏಜೆಂಟ್ ಎಂದು ಕಾಂಗ್ರೆಸ್ ಆರೋಪಿಸಿದೆ.

ಕುತೂಹಲಕಾರಿ ಸಂಗತಿಯೆಂದರೆ ನೂತನವಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಆರ್ಎಲ್‌ಡಿ ನಾಯಕ ಅಜಿತ್ ಸಿಂಗ್ ಕೂಡಾ ಅಣ್ಣಾ ಹಜಾರೆಯನ್ನು ಓರ್ವ 'ವಂಚಕ" ಎಂದು ಟೀಕಿಸಿದ್ದಾರೆ.

ಇದೀಗ, ವಿಧಾನಸಭಾ ಚುನಾವಣೆ ಸಮರಗಳ ಸಮ್ಮುಖದಲ್ಲಿ ಕಾಂಗ್ರೆಸ್ ಹಾಗೂ ಅಣ್ಣಾ ಬಳಗದ ನಡುವೆ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಆರ್ಎಸ್ಎಸ್ ಹಿರಿಯ ನಾಯಕ ನಾನಾಜಿ ದೇಶಮುಖ್ ಜತೆ ಅಣ್ಣಾ ಹಜಾರೆ ಅವರ ಭಾವಚಿತ್ರ ಹಿಂದಿ ದೈನಿಕವೊಂದರಲ್ಲಿ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಹಾಗೂ ದಿಗ್ವಿಜಯ್ ಸಿಂಗ್ (ಟ್ವಿಟ್ಟರ್ ಮೂಲಕ) ಹೀಗೆ ಹೇಳಿದ್ದಾರೆ.

1983ರಲ್ಲಿ ಅಣ್ಣಾ ಹಝಾರೆ, ನಾನಾಜಿ ದೇಶಮುಖ್ ನಾಯಕತ್ವದಲ್ಲಿ ಆರೆಸ್ಸೆಸ್‌ನಲ್ಲಿ ಕೆಲಸ ಮಾಡಿದ್ದಾರೆಂದು ಪತ್ರಿಕೆ ವರದಿ ಮಾಡಿತ್ತು. ಏತನ್ಮಧ್ಯೆ ಕೇಂದ್ರ ಸಚಿವ ಬೇನಿ ಪ್ರಸಾದ್ ವರ್ಮಾ ಕೂಡಾ ಅಣ್ಣಾ ಹಜಾರೆಯ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದು, ಅಣ್ಣಾ ಒಬ್ಬ ಸೇನಾ ಪರಿತ್ಯಾಗಿ ಎಂದು ದೂಷಿಸಿದ್ದಾರೆ.

ಇದೇ ವೇಳೆ, ಅಣ್ಣಾ ಹಜಾರೆ ತನಗೆ ಆರ್ಎಸ್ಎಸ್ ಜತೆಗೆ ನಂಟಿಲ್ಲ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಲಿ ಎಂದು ರಶೀದ್ ಅಲ್ವಿ ಸವಾಲೆಸೆದಿದ್ದಾರೆ.

English summary
Senior Congress leader Digvijaya Singh today launched yet another attack on anti-corruption crusader Anna Hazare over his alleged links to the RSS. Pointing to a report published on the front page of a prominent Hindi daily, "And he denied any association with RSS! Now whom do we believe Facts with Picture and the claim of RSS or Anna? I am again proved right", tweeted Mr Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X