ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುಕಟ್ಟೆಯಲ್ಲಿ 5ನೇ ಸ್ಥಾನಕ್ಕೆ ಕುಸಿದ ಕಿಂಗ್ ಫಿಷರ್

By Mahesh
|
Google Oneindia Kannada News

Vijay Mallya
ಬೆಂಗಳೂರು, ಡಿ.26: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆಗೆ ಜೀವ ತುಂಬುವ ಕಾರ್ಯದಲ್ಲಿ ಡಾ. ವಿಜಯ್ ಮಲ್ಯ ಮಗ್ನರಾಗಿದ್ದಾರೆ. ಆದರೆ, ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿದ ಖಾಸಗಿ ನಾಗರೀಕ ವಿಮಾನಯಾನ ಕ್ಷೇತ್ರದ ಪಟ್ಟಿಯಲ್ಲಿ ಕಿಂಗ್ ಫಿಷರ್ ಕುಸಿತ ಕಂಡಿರುವುದು ಸ್ಪಷ್ಟವಾಗಿದೆ.

ಒನ್ ವರ್ಲ್ಡ್ ಮೈತ್ರಿಕೂಟ ಸೇರುವ ಬಗ್ಗೆ ಗಮನ ಹರಿಸಿರುವ ಮಲ್ಯರಿಗೆ ಮಾರುಕಟ್ಟೆಯಲ್ಲಿ ಕಿಂಗ್ ಫಿಷರ್ ಐದನೇ ಸ್ಥಾನಕ್ಕೆ ದೂಡಲ್ಪಟ್ಟಿರುವುದು ಕೊಂಚ ಆಘಾತವಾಗಿದೆ.

ಭಾರತದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದ ಕಿಂಗ್ ಫಿಷರ್ ಈಗ ಮಾರುಕಟ್ಟೆಯಲ್ಲಿ ಶೇ 14ರಷ್ಟು ಮಾತ್ರ ಪಾಲು ಹೊಂದಿದೆ. ನವೆಂಬರ್ ತಿಂಗಳಿನಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯಗೊಂಡಿದ್ದರಿಂದ ಕಿಂಗ್ ಫಿಷರ್ ಪಟ್ಟಿಯಲ್ಲಿ ಕೆಳಗೆ ದೂಡಲ್ಪಟ್ಟಿದೆ.

ನರೇಶ್ ಗೋಯಲ್ ಅವರ ಜೆಟ್ ಸಮೂಹ ಶೇ. 27.1ರಷ್ಟು ಪಾಲಿನೊಂದಿಗೆ ಅಗ್ರಸ್ಥಾನಕ್ಕೇರಿದೆ. ನಂತರದ ಸ್ಥಾನದಲ್ಲಿ ರಾಹುಲ್ ಭಾಟಿಯಾ ಅವರ ಇಂಡಿಗೋ ಏರ್ ಲೈನ್ಸ್ ಶೇ.19.8 ಪಾಲು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ.

ಶೇ.17.4 ರಷ್ಟು ಪಾಲು ಹೊಂದಿರುವ ಏರ್ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ಸ್ಪೈಸ್ ಜೆಟ್ ನಾಲ್ಕನೇ ಸ್ಥಾನದಲ್ಲಿದ್ದು ಶೇ.15.5ರಷ್ಟು ಪಾಲು ಹೊಂದಿದೆ.

ದೇಶಿ ವಿಮಾನಯಾನದಲ್ಲಿ ಪ್ರಯಾಣಿಕರ ಸಂಖ್ಯೆ ಶೇ.17.6ರಷ್ಟು ಹೆಚ್ಚಳವಾಗಿದೆ. ಜನವರಿ-ನವೆಂಬರ್ 2011ರಲ್ಲಿ 5 ಕೋಟಿಗೂ ಅಧಿಕ ಜನ ಪ್ರಯಾಣಿಸಿದ್ದಾರೆ.

ಅದರೂ ವಿಮಾನಯಾನ ಕ್ಷೇತ್ರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂಧನ ಕೊರತೆ, ತೆರಿಗೆ ಹೆಚ್ಚಳ, ನಿರ್ವಹಣಾ ವೆಚ್ಚ ಅಧಿಕ, ಪ್ರಯಾಣ ದರ ಏರಿಕೆ ಅನಿವಾರ್ಯ, ಹೆಚ್ಚುತ್ತಿರುವ ಸಾಲದ ಹೊರೆಯೊಂದಿಗೆ ವಿಮಾನಯಾನ ಸಂಸ್ಥೆಗಳು ಹೆಣಗಾಡುತ್ತಿದೆ.

6,500 ಕೋಟಿ ಸಾಲ ಹೊತ್ತಿರುವ ಕಿಂಗ್ ಫಿಷರ್ ಸಾಲದ ಪ್ರಮಾಣವನ್ನು 3,500 ಕೋಟಿ ರುಗಳಿಗೆ ತಗ್ಗಿಸಲು ವಿವಿಧ ರೀತಿ ಪ್ರಯತ್ನಪಡುತ್ತಿದೆ.

English summary
Vijay Mallya's cash-strapped Kingfisher Airlines which used to be once India's second largest airline in terms of market share fell to the fifth position during November, government data showed. Kingfisher's market share stood at mere 14% beating only Go Air's 6.2%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X