ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಭೂ ಸೇನೆಯಲ್ಲಿ 10000 ತಜ್ಞ ಶ್ವಾನಗಳು!

By Mahesh
|
Google Oneindia Kannada News

10000 dogs in Chinese Army
ಬೀಜಿಂಗ್, ಡಿ.25: ಚೀನಾದ ಸಶಸ್ತ್ರ ಸೇನಾಪಡೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ತಜ್ಞ ನಾಯಿಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.

ಗಡಿಭಾಗದ ಗಸ್ತು ಕಾರ್ಯಾಚರಣೆ, ಶಾಂತಿಪಾಲನೆ ಹಾಗೂ ವಿಪತ್ತುಗಳ ಬಳಿಕ ನಡೆಯುವ ಶೋಧ, ಪರಿಹಾರ ಕಾರ್ಯಾಚರಣೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಶ್ವಾನಗಳು ಚೀನಾದ ಸಶಸ್ತ್ರಪಡೆಗೆ ನೆರವಾಗುತ್ತಿದೆ.

ಚೀನಾದ ಐದುಸಾವಿರಕ್ಕೂ ಅಧಿಕ ಸೇನಾ ವಿಭಾಗಗಳಲ್ಲಿ ನಾಯಿಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಬೀಜಿಂಗ್ ಮೂಲದ ಸೇನಾ ಶ್ವಾನ ತಳಿ ಸಂವರ್ಧನೆ ಹಾಗೂ ತರಬೇತಿ ಕೇಂದ್ರದ ಅಧಿಕಾರಿ ವಾಂಗ್ ಹಾನ್ ಹೇಳಿದ್ದಾರೆ.

ಚೀನಾದ ಕುನ್‌ಮಿಂಗ್, ಜರ್ಮನ್ ಶೆಫರ್ಡ್, ಬೆಲ್ಜಿಯನ್ ಶೆಫರ್ಡ್ ಹಾಗೂ ಲ್ಯಾಬ್ರಡಾರ್ ತಳಿಯ ನಾಯಿಗಳು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಮಾದಕವಸ್ತು ಕಳ್ಳಸಾಗಣೆ ಪತ್ತೆ, ಬೇಹು ಗಾರಿಕೆ ಹಾಗೂ ಗಸ್ತು ಕಾರ್ಯಾಚರಣೆಗಳಲ್ಲಿ ಶ್ವಾನದಳ ಬಳಕೆ ಅಗತ್ಯವಾಗಿದೆ. ಈ ಸಂಬಂಧ ಚೀನಾದಲ್ಲಿ ಪ್ರತಿವರ್ಷ ನೂರಾರು ನಾಯಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ವಾಂಗ್ ವಿವರಿಸಿದ್ದಾರೆ.

1950ರಲ್ಲಿ ಚೀನಾದಲ್ಲಿ ಕಾರ್ಯನಿರತ ಸೇನಾಶ್ವಾನ ವಿಭಾಗ (ಎಂಡಬ್ಲೂಡಿ)ವನ್ನು ಪ್ರಾರಂಭಿಸಲಾಗಿತ್ತು. 1960 ದಶಕದಲ್ಲಿ ನಡೆದ ಸಾಂಸ್ಕೃತಿಕ ಕ್ರಾಂತಿಯ ವೇಳೆ ಈ ಯೋಜನೆ ಯನ್ನು ಸ್ಥಗಿತಗೊಳಿಸಲಾಯಿತು. 1991ರಲ್ಲಿ ಮತ್ತೆ ಈ ವಿಭಾಗವನ್ನು ಪ್ರಾರಂಭಿಸಲಾಗಿದೆ.

English summary
More than 10000 dogs serving in Chinese Army. The Military working dogs are used in post disaster search and rescue, border patrol, peacekeeping says Chinese armed forces officials
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X