ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್‌ನಿಂದ ಹಾರಿಬಂದ ಕಟ್ಟಾಗೆ ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿ

By Srinath
|
Google Oneindia Kannada News

katta-subramanya-cast-vote-in-mlc-bypoll
ಬೆಂಗಳೂರು, ಡಿ. 23: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಲಂಡನ್‌ನಿಂದ ಹಾರಿಬಂದು, ಮುಖ್ಯಮಂತ್ರಿ ಸದಾನಂದ ಗೌಡರ ಗೆಲುವಿಗೆ ಮೆಟ್ಟಿಲಾಗಿದ್ದಾರೆ. ಬಿಳಿ ಗಡ್ಡ ಹೊತ್ತು, ತೀರಾ ಬಳಲಿದಂತೆ ಕಂಡುಬಂದ ಕಟ್ಟಾ ಸುಬ್ರಮಣ್ಯ 'ಅನಾರೋಗ್ಯದ ನಿಮಿತ್ತ ಲಂಡನ್‌ಗೆ ತೆರಳಿದ್ದೆ. ಚಿಕಿತ್ಸೆ ಪಡೆಯುತ್ತಿದ್ದು, ಜ.2ರಂದು ಮತ್ತೆ ಅಲ್ಲಿಗೆ ಹೋಗುತ್ತೇನೆ' ಎಂದು ಹೇಳಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆಗಾಗಿ ಜಾಮೀನಿನ ಮೇಲೆ ಸೀದಾ ಪರಪ್ಪನ ಅಗ್ರಹಾರದಿಂದ ಲಂಡನ್‌ಗೆ ತೆರಳಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಗುರುವಾರ ಮತದಾನ ಮಾಡುವುದು ಅನಿವಾರ್ಯವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ತಟಸ್ಥ ನಿಲುವು ತಾಳುವ ಮೂಲಕ ಸದಾನಂದ ಗೌಡರ ಗೆಲುವನ್ನು ಸುಲಲಿತಗೊಳಿಸಿದ್ದರು.

ಆದರೂ ಬುಧವಾರ ರಾತ್ರಿ ನಗರಕ್ಕೆ ಆಗಮಿಸಿದ್ದರು. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದರು. ನಂತರ ಅವರೊಟ್ಟಿಗೇ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು.

English summary
MLC election- Katta Subramanya Naidu who is is on bail and going treatment in London, returned to Bangalore on Dec 21 and cast his vote for sadananda gowda on Dec 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X