ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ ಜೈಲ್ ಭರೋ ಕರೆಗೆ ಕುಣಿಯುತ್ತಿದೆ ಕರ್ನಾಟಕ

By Prasad
|
Google Oneindia Kannada News

Jail bharo movement
ಬೆಂಗಳೂರು, ಡಿ. 23 : ಯುಪಿಎ ಸರಕಾರ ಪ್ರಸ್ತಾಪಿಸಿರುವ ಜನ ಲೋಕಪಾಲ ಮಸೂದೆಯನ್ನು ಅಣ್ಣಾ ಹಜಾರೆ ಮತ್ತು ತಂಡ ಸಾರಾಸಗಟಾಗಿ ತಳ್ಳಿಹಾಕಿರುವುದರಿಂದ ಡಿ.27ರಿಂದ ಮುಂಬೈನಲ್ಲಿ ನಡೆಯಲಿರುವ ಮೂರು ದಿನಗಳ ನಿರಶನ ಮತ್ತು ಡಿ.30ರಂದು ದೇಶದಾದ್ಯಂತ ಜರುಗಲಿರುವ ಜೈಲ್ ಭರೋ ಆಂದೋಲನಕ್ಕೆ ವೇದಿಕೆಗಳು ಸಜ್ಜಾಗುತ್ತಿವೆ.

ಈ ಜೈಲ್ ಭರೋ (ಜೈಲು ಸೇರು) ಆಂದೋಲನದಲ್ಲಿ ಧುಮುಕಲು ಅಣ್ಣಾ ಹಜಾರೆ ಭಾರತದ ಜನತೆಗೆ ಆನ್‌ಲೈನ್ ಮುಖಾಂತರ ಕರೆ ನೀಡಿದ್ದಾರೆ. ಇದಕ್ಕಾಗಿ www.jailchalo.com ವೆಬ್‌ಸೈಟ್ ರೂಪಿಸಲಾಗಿದ್ದು, ಸಾವಿರಾರು ಜನರು ನೊಂದಾಯಿಸಿಕೊಳ್ಳುತ್ತಿದ್ದಾರೆ. ಆನ್‌ಲೈನ್ ಅಲ್ಲದೆ ಎಸ್ಎಮ್ಎಸ್ ಮತ್ತು ಮಿಸ್ಡ್ ಕಾಲ್ ಮುಖಾಂತರವೂ ಆಂದೋಲನದಲ್ಲಿ ಧುಮುಕಬಹುದಾಗಿದೆ.

ಅಣ್ಣಾ ಅವರು ನೀಡಿರುವ ಈ ಕರೆಗೆ ಕರ್ನಾಟಕದಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೊಂದಾಯಿಸಿಕೊಳ್ಳುವವರಲ್ಲಿ ದೆಹಲಿ, ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಕರ್ನಾಟಕ ಇದೆ. ಅತಿ ಹೆಚ್ಚು ನೊಂದಾವಣೆಗಳು ಬೆಂಗಳೂರು, ಮಂಗಳೂರು, ಮೈಸೂರು, ಗುಲಬರ್ಗಾದಿಂದ ಆಗುತ್ತಿವೆ. ನೊಂದಾಯಿಸಿಕೊಂಡವರ ಸಂಖ್ಯೆ ಈಗಾಗಲೆ ಸಾವಿರ ದಾಟಿದೆ.

ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಕಾರಾಗ್ರಹ ಈಗಾಗಲೆ ಗಣ್ಯಾತಿಗಣ್ಯರಿಂದ ತುಂಬಿತುಳುಕುತ್ತಿರುವುದರಿಂದ, ಅಣ್ಣಾ ಕರೆಗೆ ಓಗೊಟ್ಟು ಜೈಲು ಸೇರುವ ಯುವ ಜನತೆಯನ್ನು ತುಂಬಲು ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಬೇರೆ ವ್ಯವಸ್ಥೆಗಳನ್ನು ಮಾಡಬೇಕಿದೆ.

English summary
Anna Hazare and team has called for online registration for jail bharo movement to be held on December 30. Anna Hazare has completely rejected the Jan Lokpal Bill. Karnataka and Bangalore in particular has responded positively to the jail bharo call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X