• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕುಂಜಿಗೆ 1ವರ್ಷ ನಿಷೇಧ: ಒಲಂಪಿಕ್ಸ್ ಆಸೆ ಜೀವಂತ

By Srinath
|

ನವದೆಹಲಿ, ಡಿ.23: ಭರವಸೆಯ ಅಥ್ಲೀಟ್ ಅಶ್ವಿನಿ ಅಕ್ಕುಂಜಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಒಂದು ವರ್ಷದ ನಿಷೇಧ ದೃಢಪಟ್ಟಿದೆ. ಉದ್ದೀಪನ ಮದ್ದು ಸೇವನೆ ಸಾಬೀತಾದ ಹಿನ್ನೆಲೆಯಲ್ಲಿ ಅಶ್ವಿನಿ ಜತೆಗೆ ಇತರೆ ಐದು ಅಥ್ಲೀಟುಗಳಿಗೂ ನಿಷೇಧ ಹೇರಲಾಗಿದೆ.

ನ್ಯಾ. ದೀನೇಶ್ ದಯಾಳ್ ನೇತೃತ್ವದ ಶಿಸ್ತು ಸಮಿತಿ ಸಂಶದ ಲಾಭನ್ನು ಕ್ರೀಡಾಳುಗಳತ್ತ ವಾಲಿಸಿದ್ದು, ನಿಷೇಧದ ಅವಧಿ ಕೇವಲ ಒಂದು ವರ್ಷದ್ದಾಗಿರುವುದರಿಂದ ಮುಂದಿನ ಜುಲೈನಲ್ಲಿ ಲಂಡನ್ನಿನಲ್ಲಿ ನಡೆಯುವ ಒಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆ ಜೀವಂತವಾಗಿದೆ.

ಈ ಮಧ್ಯೆ, ನಿಷೇಧದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ. ಒಂದು ವರ್ಷದ ನಿಷೇಧದ ಅವಧಿಯಲ್ಲಿ ತಮ್ಮ ಪುತ್ರಿ ಅಶ್ವಿನಿ ಪೂರ್ಣಾಭ್ಯಾಸ ಮಾಡಿ, ಜುಲೈನಲ್ಲಿ ಲಂಡನ್ನಿನಲ್ಲಿ ನಡೆಯುವ ಒಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸುವತ್ತ ಗಮನ ಕೇಂದ್ರೀಕರಿಸುವುದಾಗಿ ಅಶ್ವಿನಿ ಅವರ ಅಪ್ಪ ಸ್ಪಷ್ಟಪಡಿಸಿದ್ದಾರೆ.

ಜುಲೈ 5ರಂದು ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಕರ್ನಾಟಕದ ಅಶ್ವಿನಿ ಅಕ್ಕುಂಜಿಗೆ ನಿಷೇಧ ವಿಧಿಸಲಾಗಿತ್ತು. ಇದರಿಂದ ಅವರು ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆನಂತರ ಅವರು ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡಿಲ್ಲವಾದರೂ ಲಂಡನ್ ಒಲಂಪಿಕ್ಸ್ ನತ್ತ ತಮ್ಮ ಗುರಿ ನೆಟ್ಟಿದ್ದು, ಸತತ ಅಭ್ಯಾಸದಲ್ಲಿ ತೊಡಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
NADA bans the golden girl Ashwini Akkunji for one year. National Anti-Doping Agency's disciplinary panel banned six Indian athletes, including Asian Games double gold medalist Ashwini Akkunji, for one year with benefit of suspension period on Friday(Dec 23).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more