ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಶ್ಯಾವಾಟಿಕೆ: ದುಬೈಗೆ ಹಾರುತ್ತಿದ್ದ ಆರು ಯುವತಿಯರ ಸೆರೆ

By Srinath
|
Google Oneindia Kannada News

prostitution-six-dubai-bound-girls-rescued-mumbai
ಮುಂಬೈ, ಡಿ. 22: ದುಬೈನಲ್ಲಿ ವೇಶ್ಯಾವಾಟಿಕೆಗಾಗಿ ಹಾರುತ್ತಿದ್ದ 6 ಯುವತಿಯರನ್ನು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬುಧವಾರ ರಾತ್ರಿ ಬಂಧಿಸಿ, ರಕ್ಷಿಸಿದ್ದಾರೆ. ದಾಳಿ ವೇಳೆ ಷೇಕ್ ಷರೀಫ್ ಎಂಬ ಏಜೆಂಟ್ ನನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆಗಾಗಿ ಇವರನ್ನು ದುಬೈಗೆ ಕರೆದೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಸುಳಿವು ಪಡೆದ ಪೊಲೀಸರು ಏರ್ ಪೋರ್ಟಿಗೆ ಯುವತಿಯರು ಆಗಮಿಸುತ್ತಿದ್ದಂತೆ ದಾಳೆ ಮಾಡಿ, ವಶಕ್ಕೆ ತೆಗೆದುಕೊಂಡಿದ್ದಾರೆ. ಯುವತಿಯರು ಟೂರಿಸ್ಟ್ ವೀಸಾ ಹೊಂದಿದ್ದರು.

ಈ ವೇಶ್ಯಾವಾಟಿಕೆ ಜಾಲದಲ್ಲಿ ಭಾಗಿಯಾಗಿರುವ ಇತರೆ ಮೂವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಯುವತಿಯರು ರಾಜಸ್ಥಾನ ಮತ್ತು ಮಧ್ಯಪ್ರದೇಶದವರಾಗಿದ್ದು, ದುಬೈನಲ್ಲಿ ವೇಶ್ಯಾವಾಟಿಕೆ ಕೂಪಕ್ಕೆ ಇವರನ್ನು ತಳ್ಳುವ ಪ್ರಯತ್ನ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.

English summary
Six girls, who were allegedly being sent to Dubai for flesh trade, were rescued from the international airport in Mumbai on Wednesday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X