ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನಯಾನದಲ್ಲಿ ಕಿಂಗ್ ಫಿಷರ್ ಮತ್ತೆ ಕಿಂಗ್

By Mahesh
|
Google Oneindia Kannada News

Vijay Mallya
ಬೆಂಗಳೂರು, ಡಿ.22: ಡಾ. ವಿಜಯ ಮಲ್ಯ ಉಪಾಯವಾಗಿ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆಯನ್ನು ಮತ್ತೆ ಮೇಲಕ್ಕೇತ್ತುತ್ತಿದ್ದಾರೆ. ಒನ್ ವರ್ಲ್ಡ್ ಮೈತ್ರಿಕೂಟ ಜಾಗತಿಕವಾಗಿ ಹಾಗೂ ದೇಶಿಯವಾಗಿ ವಿಮಾನಯಾನ ಅಭಿವೃದ್ಧಿಗೆ ಪೂರಕವಾಗಿರುವ ಬೆನ್ನಲ್ಲೇ ಕಿಂಗ್ ಫಿಷರ್ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಾಯಕವಾಗಲಿದೆ.

ಮೈತ್ರಿ ಕೂಟ ಸೇರಿದ ಮೇಲೆ ಆಗುವ ಪ್ರಯೋಜನಗಳು:
* ಜೂನ್ 2010ರಲ್ಲಿ ಈ ಮೈತ್ರಿಕೂಟ ಸೇರಲು ಕಿಂಗ್ ಫಿಷರ್ ಗೆ ಆಹ್ವಾನ ಸಿಕ್ಕಿತ್ತು, ಮೈತ್ರಿ ಕೂಟ ಸೇರಿದ ಮೇಲೆ ಸುಮಾರು 31 ಏರ್ ಲೈನ್ಸ್ ಗಳಿಗೆ ಕಿಂಗ್ ಫಿಷರ್ ಸಂಪರ್ಕ ಹೊಂದಲಿದೆ.
* 'ಒನ್‌ವರ್ಲ್ಡ್'ನಲ್ಲಿ ಅಮೆರಿಕನ್ ಏರ್‌ಲೈನ್ಸ್, ಬ್ರಿಟಿಷ್ ಏರ್‌ವೇಸ್, ಕ್ಯಾಥೆ ಪೆಸಿಫಿಕ್, ಫಿನ್ ಏರ್, ಜಪಾನ್ ಏರ್‌ಲೈನ್ಸ್, ಕಾಂಟಾಸ್ ಮತ್ತು ರಾಯಲ್ ಜೋರ್ಡಾನಿಯನ್ ವಿಮಾನ ಯಾನ ಸಂಸ್ಥೆಗಳು
* ನವದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಈ ಸಂಸ್ಥೆಗಳ ಸೇವೆ ಲಭ್ಯ ಇದೆ. ಹಾಗಾಗಿ ದೇಶಿ ವಿಮಾನಯಾನದಲ್ಲೂ ಕಿಂಗ್ ಫಿಷರ್ ಮತ್ತೆ ಕಿಂಗ್ ಆಗಿ ಮೆರೆಯಬಹುದು.
* 150 ದೇಶಗಳ 850 ನಗರಗಳಿಗೆ ಈ ಮೈತ್ರಿಕೂಟದ ಸೇವೆ ವಿಸ್ತರಣೆ ಆಗಲಿದ್ದು, ಇದರ ಲಾಭ ಕಿಂಗ್ ಫಿಷರ್ ಗೆ ಹೆಚ್ಚಾಗಿ ಆಗಲಿದೆ.
* ಎಲ್ಲಕ್ಕಿಂತ ಹೆಚ್ಚಾಗಿ ಕಿಂಗ್ ಫಿಷರ್ ಸಂಸ್ಥೆ ಆದಾಯ ಶೇ.5 ರಷ್ಟು ಹೆಚ್ಚಾಗಲಿದೆ.

ಕಿಂಗ್ ಫಿಷರ್ ಬ್ರ್ಯಾಂಡ್ ಜಾಗತಿಕವಾಗಿ ಸದೃಢಗೊಳ್ಳುತ್ತದೆ. ಹೆಚ್ಚೆಚ್ಚು ಪ್ರಯಾಣಿಕರು ಕಿಂಗ್ ಫಿಷರ್ ವಿಮಾನ ಏರಿದಂತೆ ಹೆಚ್ಚೆಚ್ಚು ಆದಾಯ, ಅವಕಾಶಗಳು ಮಲ್ಯ ಕೈ ಸೇರಲಿದೆ. ಮಾರುಕಟ್ಟೆ ವಿಸ್ತರಣೆ ಜೊತೆಗೆ ಸಂಸ್ಥೆಯ ಮೌಲ್ಯ ಹೆಚ್ಚುತ್ತದೆ ಎಂದು ಮೈತ್ರಿಕೂಟದ ವಕ್ತಾರರು ಹೇಳಿದ್ದಾರೆ.

ಸುಮಾರು 6,419 ಕೋಟಿ ಸಾಲದ ಹೊರೆ ಹೊತ್ತಿರುವ ಕಿಂಗ್ ಫಿಷರ್ ಸಂಸ್ಥೆಗೆ ಶುಭಕಾಲ ಆರಂಭವಾಗಿದ್ದು, ಮತ್ತೆ ವಿಮಾನಯಾನ ಸುಗಮವಾಗುವ ಲಕ್ಷಣಗಳಿವೆ.

English summary
Dr. Vijay MAllya's Kingfisher Airlines will soon join oneworld Airline alliance in Feb 10. 2012. With this global alliance Kingfisher can improve revenue. After alliance Kingfisher can will join the network of 31 airlines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X