ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಆಂಧ್ರ ರೆಡ್ಡಿ ಸಾಫ್ಟ್‌ವೇರ್ ಕಂಪನಿಯ ದೋಖಾ

By Srinath
|
Google Oneindia Kannada News

hp-finsoft-solutions-bangalore-cheats-vendors
ಬೆಂಗಳೂರು, ಡಿ. 22: ಮಡಿವಾಳದ ರೂಪೇನ ಅಗ್ರಹಾರದಲ್ಲಿರುವ 'ಎಚ್‌ಪಿ ಫಿನ್‌ಸಾಫ್ಟ್ ಸಲ್ಯೂಷನ್ಸ್‌ ಪ್ರೈವೆಟ್‌ ಲಿಮಿಟೆಡ್‌' ಎಂಬ ಕಂಪನಿ ತನ್ನ ನೂರಾರು ಐಟಿ ಉದ್ಯೋಗಿಗಳಿಗೆ ಚಳ್ಳೆಹಣ್ಣು ತಿನ್ನಿಸಿ, ಕೋಟ್ಯಂತರ ರೂಪಾಯಿ ವಂಚಿಸಿ, ಬಾಗಿಲು ಮುಚ್ಚಿಕೊಂಡು ಹೋಗಿದೆ. ಗಮನಾರ್ಹವೆಂದರೆ ಆಂಧ್ರ ಪ್ರದೇಶದಲ್ಲಿ ಇದೇ ಹೆಸರಿನ ಕಂಪನಿ ವ್ಯವಸ್ಥಿತವಾಗಿ ಆಗಾಗ್ಗೆ ಇಂತಹ ವಂಚನೆಗಳನ್ನು ಮಾಡುತ್ತಾ ಬಂದಿದೆ.

ಈ ಸಂಬಂಧ ವಂಚನೆಗೆ ಒಳಗಾದ 'ವಾಂಟೆಜ್‌ ಸಾಫ್ಟ್ ವೇರ್ ಸಲ್ಯೂಷನ್ಸ್‌' ಎಂಬ ಕಂಪನಿಯ ವಿಕಾಸ್‌ ಎಂಬವರು ಮಡಿವಾಳ ಪೊಲೀಸ್‌ ಠಾಣೆಗೆ ಮಂಗಳವಾರ ದೂರು ಕೊಟ್ಟಿದ್ದಾರೆ.

ಎಚ್‌ಪಿ ಫಿನ್‌ಸಾಫ್ಟ್ ಕಂಪನಿಯು ಸುಮಾರು 65 ಲಕ್ಷ ರೂ. ಮೋಸ ಮಾಡಿದೆ ಎಂದು ವಿಕಾಸ್‌ ದೂರಿನಲ್ಲಿ ತಿಳಿಸಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಎಚ್‌ಪಿ ಫಿನ್‌ಸಾಫ್ಟ್ ಕಂಪನಿ ಕಾರ್ಯಾರಂಭ ಮಾಡಿತ್ತು. ನೂತನ ಕಂಪನಿಗೆ ಬೇಕಾದ ಸುಮಾರು 65 ಲಕ್ಷ ರೂ. ಮೌಲ್ಯದ ಕಂಪ್ಯೂಟರುಗಳನ್ನು ವಾಂಟೇಜ್‌ ಸಾಫ್ಟ್ ವೇರ್ ಸಲ್ಯೂಷನ್ಸ್‌ನಿಂದ ಖರೀದಿಸಿತ್ತು. ಆದರೆ ಹಣ ಪಾವತಿಸಿರಲಿಲ್ಲ. ಈಗ ಕಂಪನಿಯೇ ಬಂದ್‌ ಆಗಿದೆ.

English summary
According to police sources HP Finsoft pvt ltd, in Roopena Agrahara in Bangalore cheats employees and vendors. The Software company is now closed down .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X