ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಪ್ರದಾ ಮತ್ತೆ ಕಣಕ್ಕೆ, ರಂಗೇರಿದೆ ಉತ್ತರ ಪ್ರದೇಶ

By Mahesh
|
Google Oneindia Kannada News

Jaya Prada to enter Fray
ಲಖ್ನೋ, ಡಿ.21: 2012ರಲ್ಲಿ ನಡೆಯಲಿರುವ ಉತ್ತರ ಪ್ರದೇಶದ ಅಸೆಂಬ್ಲಿ ರಂಗೇರುವಂತೆ ಮಾಡಲು ಸಮಾಜವಾದಿ ಪಕ್ಷದ ಮಾಜಿ ಸದಸ್ಯೆ ಜಯಪ್ರದಾ ಸಿದ್ಧತೆ ನಡೆಸಿದ್ದಾರೆ. ರಾಷ್ಟ್ರೀಯ ಲೋಕ ಮಂಚ್ ಅಡಿಯಲ್ಲಿ ಒಂದು ಕಾಲದ ಪಾರ್ಟಿ ಗೆಳೆಯ ಆಜಂ ಖಾನ್ ವಿರುದ್ಧ ಜಯಾರನ್ನು ನಿಲ್ಲಿಸಲು ಅಮರ್ ಸಿಂಗ್ ತಂತ್ರ ಹೂಡಿದ್ದಾರೆ.

ರಾಮ್ ಪುರದ ಸಂಸದೆ ಜಯಪ್ರದಾ ಹಾಗೂ ಅಜಂ ಖಾನ್ ನಡುವೆ ಅನೇಕ ಜಗಳ ಕದನಗಳು ನಡೆದಿದ್ದು ಸರ್ವವಿದಿತ.

2009ರ ಸಂಸದೀಯ ಚುನಾವಣೆಯಲ್ಲಿ ಮುಂಬೈ ಎಟಿಎಸ್ ಕಾಪ್ ಹುತಾತ್ಮ ಹೇಮಂತ್ ಕರ್ಕರೆ ಪತ್ನಿ ಕವಿತಾ ಕರ್ಕರೆ ಅವರಿಗೆ ಎಸ್ ಪಿ ಟಿಕೆಟ್ ನೀಡಲು ಅಜಂ ಖಾನ್ ಮುಂದಾಗಿದ್ದರು.

ಆದರೆ, ಈ ಐಡ್ಯಾವನ್ನು ತಳ್ಳಿ ಹಾಕಿದ ಎಸ್ ಪಿ ರಾಮಪುರ್ ಕ್ಷೇತ್ರದಿಂದ ಜಯಪ್ರದಾರನ್ನು ನಿಲ್ಲಿಸಿ ಗೆಲ್ಲಿಸಲಾಗಿತ್ತು.

ಅಜಂ ಖಾನ್ ಅಸೆಂಬ್ಲಿ ಪ್ರವೇಶ ತಡೆಯಲು ಬೇಕಾದ ಎಲ್ಲಾ ಸಿದ್ದತೆ ನಡೆಸಲಾಗಿದೆ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಸಿಂಗ್ ಹೇಳಿದ್ದಾರೆ.

ಪಕ್ಷದ ಹಿತದೃಷ್ಟಿಗೆ ಅನುಗುಣವಾಗಿ ನಾನು ವರ್ತಿಸುತ್ತೇನೆ. ಪಕ್ಷ ಬಯಸಿದರೆ ಅಜಂ ಖಾನ್ ವಿರುದ್ಧ ಸ್ಪರ್ಧೆಗೆ ಇಳಿಯಲು ನಾನು ಸಿದ್ಧ ಎಂದು ನಟಿ ಕಮ್ ಸಂಸದೆ ಜಯಪ್ರದಾ ಘೋಷಿಸಿದ್ದಾರೆ.

English summary
With major political parties keen to show their political strength ahead of the upcoming Uttar Pradesh Assembly polls in 2012, the latest person to jump into the poll fray is Jaya Prada. The decision was made by ousted Samajwadi Party leader Amar Singh. She will contest under the Rashtriya Lok Manch banner against SP leader and rival Azam Khan in the polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X