ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್, ನಾನು ಗರ್ಭಿಣಿ, ಹೌದಾ, ಕೆಲ್ಸಕ್ಕೆ ಬರ್ಬೇಡ

By Mahesh
|
Google Oneindia Kannada News

Pregnant Woman Fired From Job, London
ಲಂಡನ್, ಡಿ.20: ಆಕೆ ಹೆಸರು ಜೆನ್ನಿಫರ್ ಕಾಕ್ಸ್, ಇತ್ತೀಚೆಗೆ ಕೆಲಸದಿಂದ ವಜಾಗೊಂಡಿದ್ದಾಳೆ. ತಾನು ಗರ್ಭಿಣಿ ಎಂದು ತನ್ನ ಬಾಸ್ ಗೆ ಹೇಳಿದ ಕಾರಣ ಆಕೆಯನ್ನು ಕಂಪನಿಯಿಂದ ಹೊರ ದಬ್ಬಲಾಗಿದೆ.

ಬರ್ಕ್ ಶೈರ್ ನ ಅಲ್ಡರ್ಮಸ್ಟನ್ ನಲ್ಲಿರುವ ಸೇನಾ ಇಲಾಖೆಗೆ ಸೇರಿದ ಅಣ್ವಸ್ತ್ರ ತಯಾರಿಕಾ ಘಟಕದಲ್ಲಿ 33 ವರ್ಷದ ಕಾಕ್ಸ್, ವೆಬ್ ಸೈಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು.

ಕಂಪನಿಯ ಇಂಟ್ರಾನೆಟ್ ಮಾಹಿತಿಗಳನ್ನು ಅಪ್ಡೇಟ್ ಮಾಡುವುದು ಕಾಕ್ಸ್ ಕೆಲಸವಾಗಿತ್ತು. ಕಾಕ್ಸ್ ಗೆ ಇದು ಪಾರ್ಟ್ ಟೈಮ್ ಕೆಲಸವಾದರೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಳು.

ರಜೆ ಕೇಳಿದ್ದೆ ತಪ್ಪಾಯ್ತು: ಆದರೆ, ಗರ್ಭಾವಸ್ಥೆಯ ಸೂಚನೆ ಕಂಡು ಬಂದ ನಂತರ ಚಿಕಿತ್ಸೆಗಾಗಿ ವೈದ್ಯರ ಬಳಿ ತೆರಳಬೇಕು ಕೆಲವು ದಿನ ಮುಂಜಾನೆ ಹೊತ್ತು ಬರಲು ಕಷ್ಟ ಎಂದು ತನ್ನ ಬಾಸ್ ಹತ್ತಿರ ರಜೆ ಕೇಳುತ್ತಾಳೆ. ಆದರೆ, ಆಕೆ ಮೇಲೆ ಬಾಸ್ ರೇಗಾಡುತ್ತಾನೆ.

ಬಾಸ್ ರೇ ಕ್ರಾಸ್ ಹುಚ್ಚನಂತೆ ವರ್ತಿಸಿ, ಲಿಂಗ ತಾರತಮ್ಯ ಮಾಡಿದ್ದಾನೆ ಎಂದು ಕಾಕ್ಸ್ ಆರೋಪ ಹೊರೆಸಿದ್ದಾಳೆ.

ಆದರೆ, ಕ್ರಾಸ್ ನಡೆ ನುಡಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸದ ಸಂಸ್ಥೆ, ಕ್ರಾಸ್ ಮಾಡಿದ್ದು ಸರಿಯಾಗಿದೆ ಇಂಟ್ರಾನೆಟ್ ಕಾರ್ಯ ಸ್ಥಗಿತಗೊಂಡಿತ್ತು ಎಂದು ಸಮರ್ಥಿಸಿದೆ.

ಈಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಹೊಸ ವರ್ಷದ ಆರಂಭದಲ್ಲಿ ತೀರ್ಪು ಹೊರಬೀಳಲಿದೆ. ಪಾರ್ಟ್ ಟೈಮ್ ಕೆಲಸ, ಫುಲ್ ಟೈಮ್ ಆಗುತ್ತದೆ ಎಂದು ಕನಸು ಹೊತ್ತಿದ್ದ ಕ್ರಾಸ್, ಕೆಲಸ ಕಳೆದುಕೊಂಡು ಕೋರ್ಟ್ ಪರಿತಪಿಸುತ್ತಿದ್ದಾಳೆ.

English summary
A 33 old woman Jennifer Cox has been fired by the Ministry of Defence police at the Atomic Weapons Establishment in Aldermaston, Berkshire. Reason behind her termination is she revealed about her pregnancy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X