ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪ ಬಸವಲಿಂಗಪ್ಪನ ಶಿಷ್ಯ; ಪುತ್ರ ಯಡಿಯೂರಪ್ಪನ ಶಿಷ್ಯ

By Srinath
|
Google Oneindia Kannada News

yelahanka-vishwanath-father-congress-loyalist
ಬೆಂಗಳೂರು, ಡಿ. 20: ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ 1978ರಿಂದ 1991ರವರೆಗೂ RSS ಕಾರ್ಯಕರ್ತ. ಇಂತಿಪ್ಪ ವಿಶ್ವನಾಥ, ಆರಂಭದಲ್ಲಿ ಯಲಹಂಕ ಪಕ್ಕದ ಹೆಸರಘಟ್ಟದಲ್ಲಿ ಮನೆಮಾತಾದರು. ಹೀಗಾಗಿ, 2000ನೇ ಇಸ್ವಿಯಲ್ಲಿ ಬಿಜೆಪಿಯಿಂದ ಜಿಲ್ಲಾ ಪಂಚಾಯ್ತಿಗೆ ನಿಂತು ಗೆದ್ದೂ ಬಿಟ್ಟರು. ಮುಂದೆ 2008ರ ವೇಳೆಗೆ ಯಲಹಂಕದ ಶಾಸಕರೂ ಆದರು.

ವಿಶ್ವನಾಥರ ತಂದೆ ಕೆವಿ ರಾಮಯ್ಯ ಕೃಷಿಕರು. ಕಾಂಗ್ರೆಸ್ ಕಾರ್ಯಕರ್ತರೂ ಆಗಿದ್ದರು. ಸಚಿವ ಬಸವಲಿಂಗಪ್ಪ ಅವರ ಅನುಯಾಯಿ. ಆದರೆ ಕಾಂಗ್ರೆಸ್ ಅಧಿನಾಯಕಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದನ್ನು ಖಂಡಿಸಿದ ರಾಮಯ್ಯನವರು ಬಿಜೆಪಿಯಲ್ಲಿ ಗುರಿತಿಸಿಕೊಳ್ಳವಂತೆ ಪುತ್ರನಿಗೆ ಮಾರ್ಗದರ್ಶನ ನೀಡಿದರು. ಅದರಂತೆ 1978ರಲ್ಲಿ RSS ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು. ಮುಂದೆ ಬಿಜೆಪಿಯ ಯುವ ಘಟಕದ ಅಧ್ಯಕ್ಷರಾಗಿ ತಳವೂರಿದರು.

ಮುಂದ ... ಬಿಜೆಪಿ ಶಾಸಕರಾಗುತ್ತಿದ್ದಂತೆ ಜಿಲ್ಲಾ ಪಂಚಾಯ್ತಿ ಸದಸ್ಯತ್ವವನ್ನು ಪತ್ನಿಗೆ ಧಾರೆಯೆರೆದರು. ಪತ್ನಿ ವಾಣಿಶ್ರೀ ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ರಾಜಕೀಯ ಬಿರುಸು ಕಂಡುಕೊಂಡರು. ದೊಡ್ಡಬಳ್ಳಾಪುರ ರಸ್ತೆಗೆ ಅಂಟಿಕೊಂಡಿರುವ ಸಿಂಗನಾಯಕನಹಳ್ಳಿಯಲ್ಲಿ ದಂಪತಿ ಪಟ್ಟಭದ್ರರಾದರು. ಕುತೂಹಲದ ಸಂಗತಿಯೆಂದರೆ ಎಸ್ಆರ್ ವಿಶ್ವನಾಥ್ ಕರಾಟೆಯಲ್ಲಿ brown belt !

English summary
Yelahanka BJP MLA, S R Vishwanath was just a flight control technician in HAL and his political growth was like Jaguar ascent. interestingly his father K V Ramaiah was Congress loyalist and a close aide of Basavalingappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X