ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ವಿಶ್ವನಾಥರ 'ಅಪೂರ್ವ ಲೋಕ'ದಲ್ಲಿ ಏನಿತ್ತು?

By Srinath
|
Google Oneindia Kannada News

lokayukta-find-huge-assets-in-mls-vishwanath-house
ಬೆಂಗಳೂರು, ಡಿ. 20: ಲೋಕಾಯುಕ್ತ ದಾಳಿಗೆ ತುತ್ತಾಗಿರುವ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಯಲಹಂಕ, ಹೆಬ್ಬಾಳ, ಹೆಸರಘಟ್ಟ, ದೊಡ್ಡಬಳ್ಳಾಪುರ ಅದರಾಚೆ ಗೌರಿಬಿದನೂರು ಹೀಗೆ ಎಲ್ಲೆಲ್ಲಿ ನೆಲ ಕಾಣೊತ್ತೋ ಅಲ್ಲೆಲ್ಲ ಸ್ಥಿರಾಸ್ತಿ ಮಾಡಿಟ್ಟಿದ್ದಾರೆ. ದಾಳಿಯ ನಂತರ ಜನವರಿ 6ರಂದು ಲೋಕಾಯುಕ್ತ ಪೊಲೀಸರು ಕೋರ್ಟಿನಲ್ಲಿ ಚಾರ್ಜ್ ಶೀಟ್ ದಾಖಲಿಸಲಿದ್ದಾರೆ.

ಇನ್ನು ಅವರು ತಮ್ಮ ಮನೆಗಳಿಗೆ ಇಟ್ಟಿರುವ ಹೆಸರೂ ಅಪೂರ್ವವಾಗಿಯೇ ಇವೆ. ನಿನ್ನೆ ಲೋಕಾಯುಕ್ತರು ದಾಳಿ ನಡೆಸಿದ ಒಂದು ಮನೆಯ ಹೆಸರು ಅಪೂರ್ವ ಲೋಕ. ಉಳಿದಂತೆ ಲೋಕ ಪ್ರಿಯ ಮುಂತಾದ ಹೆಸರುಗಳೂ ಇವೆ. ದುರ್ದೈವ ಅಂದರೆ ಈ ಭರ್ಜರಿ ಬಂಗಲೆಗಳು ಲೋಕಾಯುಕ್ತರಿಗೂ ಪ್ರಿಯವಾಗಿವೆ. ಈ ಬಂಗಲೆಗಳ ಹೆಸರಿಲ್ಲಿ ನಮ್ಮ 'ಲೋಕ'ವಿದೆ. ಒಳಗೆ ಏನಿದೆಯೋ ಎಂಬ ಕೆಟ್ಟ ಕುತೂಹಲದಿಂದ ಒಮ್ಮೆ ಹಾಗೇ ಒಳಗೆಲ್ಲ ಅಡ್ಡಾಡಿಕೊಂಡು ಬಂದವರೇ ಭರ್ಜರಿ ಫಸಲನ್ನೇ ಕಿತ್ತಿದ್ದಾರೆ.

1.1 ಕೆಜಿ ಚಿನ್ನ, 11 ಕೆಜಿ ಬೆಳ್ಳಿ, 14.45 ಲಕ್ಷ ನಗದು, 2500 ಯುಎಸ್‌ ಡಾಲರ್, ಕಾಫಿ ಬೋರ್ಡ್‌ ಲೇಔಟ್‌ನಲ್ಲಿ ಎರಡು ಫ್ಲ್ಯಾಟ್‌, ರಾಜಾನುಕುಂಟೆಯಲ್ಲಿ ಎರಡು ಕಟ್ಟಡ, ಭುವನೇಶ್ವರಿ ನಗರದಲ್ಲಿ ಎರಡು ಕಟ್ಟಡ, 65 ಎಕರೆ ಕೃಷಿ ಜಮೀನು, 40 ಲಕ್ಷ ರೂ. ಗೃಹೋಪಯೋಗಿ ವಸ್ತುಗಳು, 1 ಟೊಯೋಟಾ ಇನೋವಾ, 1 ಟೊಯೋಟಾ ಫಾರ್ಚೂನ್‌, 4 ಟ್ರ್ಯಾಕ್ಟರುಗಳು. ಇನ್ನು, ವಿಶ್ವನಾಥ್ ಪತ್ನಿ ಅಧ್ಯಕ್ಷೆಯಾಗಿರುವ ರೈತ ಸೇವಾ ಸಹಕಾರ ಬ್ಯಾಂಕ್‌ನಲ್ಲಿ ಅವರ ಹೆಸರಿನಲ್ಲಿ ಎರಡು ಲಾಕರುಗಳಿವೆ ಎಂದು ಲೋಕಾಯುಕ್ತ ಮೂಲಗಳು ಇಳಿಸಿವೆ.

ಅದಕ್ಕೂ ಮುನ್ನ ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ ಯಲಹಂಕ ನಿವಾಸಿ ವಿ. ಶಶಿಧರ್ ಅವರು ನೀಡಿರುವ ವಿಶ್ವನಾಥರ ಆಸ್ತಿಪಾಸ್ತಿ ವಿವರ ಹೀಗಿದೆ, ಓದಿಕೊಳ್ಳಿ:

ವಿಧುರಾಶ್ವಥದಲ್ಲಿ 125 ಎಕರೆ ಕೃಷಿ ಭೂಮಿ, ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಮಂಚೇನಹಳ್ಳಿ ಹೋಬಳಿ ವರಗಳಿಯಲ್ಲಿ 110 ಎಕರೆ ಜಮೀನು, ನಾಗಶೆಟ್ಟಿಹಳ್ಳಿಯಲ್ಲಿ ಅಪಾರ್ಟ್ ಮಂಟ್ ಹೊಂದಿದ್ದಾರೆ.

ಅಲ್ಲದೆ ಅಪರಾಧ ಹಿನ್ನೆಲೆಯುಳ್ಳ ಸತೀಶ್ ಎಂಬುವವರ ಹೆಸರಿನಲ್ಲಿ ಕೊಡಿಗೇನಹಳ್ಳಿಯಲ್ಲಿ, ಹೃದರಾಬಾದ್ ಹೈವೇಗೆ ಅಂಟಿಕೊಂಡಿರುವ ಗಂಗಾಧರೇಶ್ವರ ಕಲ್ಯಾಣ ಮಂಟಪ ಹೊಂದಿರುವ ಮಾಹಿತಿಯೂ ಇದೆ. ಈ ಆಸ್ತಿಪಾಸ್ತಿಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಶಶಿಧರ್ ಅವರು ಹೇಳಿದ್ದಾರೆ.

English summary
Bangalore Lokayukta police raided the house of Yelahanka MLA Vishwanath at Singanayakanahally and unearthed documents, other movable articles and immovables. They are 1.1 kg of gold, silver articles weighing 11 kg, household articles amounting to Rs 40 lakh, two flats, four buildings, 65 acres of agriculture land besides cash of Rs 1.71 lakh, foreign currencies worth Rs 1.5 lakh, two cars and four tractors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X