ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹೀಂದ್ರಾ ಸತ್ಯಂ-ಟೆಕ್ ಮಹೀಂದ್ರಾ ವಿಲೀನ, ಸಂಚಲನ?

By Mahesh
|
Google Oneindia Kannada News

Mahindra Satyam – Tech Mahindra merger plan
ಮುಂಬೈ, ಡಿ.20: ಮಂಗಳವಾರ ಮಂಗಳಕರ ಸುದ್ದಿ ಹಬ್ಬಿದ ಬೆನ್ನಲ್ಲೇ ಮಹೀಂದ್ರಾ ಸತ್ಯಂ ಷೇರುಗಳು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸತೊಡಗಿದೆ. ಮಹೀಂದ್ರಾ ಅಂಡ್ ಮಹೀಂದ್ರಾ- ಮಹೀಂದ್ರ ಸತ್ಯಂ ಹಾಗೂ ಟೆಕ್ ಮಹೀಂದ್ರ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಿರುವ ಸುದ್ದಿ ಹಬ್ಬಿದ್ದು ಷೇರು ಪೇಟೆಯಲ್ಲಿ ಸಂಚಲನಕ್ಕೆ ಕಾರಣವಾಗಿೆ.

ಎಂ ಅಂಡ್ ಎಂ ಸಮೂಹದ ಸಾಫ್ಟ್ ವೇರ್ ಕಂಪನಿ ಸದ್ಯಕ್ಕೆ ಟಿಸಿಎಸ್, ಇನ್ಫೋಸಿಸ್, ಕಾಂಗ್ನಿಜೆಂಟ್, ವಿಪ್ರೋ ಹಾಗೂ ಎಚ್ ಸಿಎಲ್ ಟೆಕ್ನಾಲಜೀಸ್ ನಂತರದ ಸ್ಥಾನದಲ್ಲಿದೆ.

ಎಕಾನಾಮಿಕ್ ಟೈಮ್ಸ್ ವರದಿಯ ಪ್ರಕಾರ ಅಕೌಂಟೆಂಟ್ ಗಳು ಹಾಗೂ ಮರ್ಚೆಂಟ್ ಬ್ಯಾಂಕರ್ ಗಳು ಕಂಪನಿಗಳ ಡೀಲ್ ಮೌಲ್ಯದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಬಿಎಸ್ ಇ ಹಾಗೂ ಎನ್ ಎಸ್ ಇನಲ್ಲಿ ಎರಡು ಕಂಪನಿಗಳ ಷೇರು ಮೌಲ್ಯ ಗಣನೆ ಬರಲಿದ್ದು, ಷೇರು ಪೇಟೆಯಲ್ಲಿ ಮಂಗಳವಾರ ಶುಭಕರವಾಗಿ ಪರಿಣಮಿಸಿದೆ. ವಿಲೀನ ಪ್ರಕ್ರಿಯೆ ಸುದ್ದಿ ಹರಡುತ್ತಿದ್ದಂತೆ ಎರಡು ಕಂಪನಿ ಷೇರುಗಳು ಏರಿಕೆ ಕಂಡಿದೆ.

ಆದರೆ, ಕಂಪನಿಗಳ ವಿಲೀನ ಅಷ್ಟು ಸುಲಭವಾಗಿಲ್ಲ. ಮಾಜಿ ಸಿಇಒ ರಾಮಲಿಂಗ ರಾಜು ಕೃಪಾಕಟಾಕ್ಷದಿಂದ ಸುಮಾರು 2,500 ಕೋಟಿ ರು ಆದಾಯ ತೆರಿಗೆ ಭಾರವನ್ನು ಮಹೀಂದ್ರ ಸತ್ಯಂ ಹೊತ್ತುಕೊಂಡಿದೆ.

English summary
The scrip of Mahindra Satyam advanced on the Bombay Stock Exchange (BSE) after the news floated by Economic Times (ET) on Tuesday that the two wings of Mahindra & Mahindra (M&M) – Mahindra Satyam and Tech Mahindra are close to appointing merchant bankers and accounting firms to value the two businesses for an eventual merger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X