ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ : ಮುಂದಿನ ವರ್ಷ 2.5 ಲಕ್ಷ ಉದ್ಯೋಗ ಸೃಷ್ಟಿ

By Srinath
|
Google Oneindia Kannada News

it-2-lakh-jobs-india-2012-infy-gopalakrishnan
ನವದೆಹಲಿ, ಡಿ. 20: ಭಾರತದಲ್ಲಿ information technology ಕ್ಷೇತ್ರದಲ್ಲಿ 2012ನೇ ಸಾಲಿನಲ್ಲಿ ಸುಮಾರು 2.5 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಸಹ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಮಂಗಳವಾರ ಹೇಳಿದ್ದಾರೆ.

ಮುಂದಿನ ವರ್ಷ ಅಲ್ಪಾವಧಿಗೆ ಆರ್ಥಿಕ ಸಂಕಷ್ಟತೆ ಎದುರಾಗಲಿದೆಯಾದರೂ ಐಟಿ ಕ್ಷೇತ್ರದಲ್ಲಿ ಹೂಡಿಕೆಗೆ ಏನೂ ತೊಂದರೆಯಾಗದು. ಇದೇ ವೇಳೆ ಸುಮಾರು 2.5 ಲಕ್ಷ ಮಂದಿಗಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದೂ ಅವರು ಅಭಯ ನೀಡಿದ್ದಾರೆ.

ಭಾರತದಲ್ಲಿ ನೆಲೆಸಿರುವ ಅಭಿವೃದ್ಧಿ ಕೇಂದ್ರಗಳು, ಬಂಡವಾಳ ಕೇಂದ್ರಗಳು ಮತ್ತು ಸೇವಾ ಕಂಪನಿಗಳತ್ತ ಇಡೀ ವಿಶ್ವದ ಗಮನ ಹರಿದಿದೆ. ಇದು ನಮ್ಮ ಪ್ರಗತಿಗೆ ಖಾತ್ರಿಯಾಗಿದೆ. ಭಾರತ ಈಗಾಗಲೇ ಈ ಕ್ಷೇತ್ರಗಳಲ್ಲಿ ಭದ್ರವಾಗಿದೆ. ಆದ್ದರಿಂದ ಬಹುರಾಷ್ಟ್ರೀಯ ಮತ್ತು ದೇಶೀಯ ಕಂಪನಿಗಳಿಗೆ ಉತ್ತಮ ಭವಿಷ್ಯವಿದೆ ಎಂದು ಕ್ರಿಸ್ ವಿಶ್ಲೇಷಿಸಿದ್ದಾರೆ.

English summary
IT giant Infosys's Co-Chairman Krish Gopalakrishnan has said that the IT sector in India will generate around 2-2.5 lakh jobs in 2012. Gopalakrishna also spoke of evident growth in technology investment but also voiced concern over the short-term economic ucertainity .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X