For Daily Alerts
ಆರು ದಿಗ್ಗಜರಿಗೆ ನಾಡೋಜ ಪ್ರಶಸ್ತಿ ಪ್ರಕಟ
ಹೊಸಪೇಟೆ, ಡಿ.19: ಸಾಹಿತಿ ಎಸ್ ಎಲ್ ಭೈರಪ್ಪ ಸೇರಿದಂತೆ ಆರು ಮಂದಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ 2011ನೇ ಸಾಲಿನ ನಾಡೋಜ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ ಎ ಮುರಿಗೆಪ್ಪ ಅವರು ಸೋಮವಾರ(ಡಿ.19) ಸುದ್ದಿಗಾರರಿಗೆ ತಿಳಿಸಿದರು.
ವಿವಿಧ ಕ್ಷೇತ್ರದ ಹಿರಿಯ ಚೇತನಗಳನ್ನು ಈ ಬಾರಿಯ ನಾಡೋಜ ಪುರಸ್ಕಾರ ಲಭಿಸಲಿದೆ. ಡಿ. 26 ರಂದು ಹಂಪಿಯಲ್ಲಿ ನಡೆಯುವ ನುಡಿಹಬ್ಬದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುರಿಗೆಪ್ಪ ಹೇಳಿದರು.
ನಾಡೋಜ ಪುರಸ್ಕೃತ ದಿಗ್ಗಜರು:
* ಖ್ಯಾತ ಸಾಹಿತಿ ಡಾ. ಎಸ್.ಎಲ್.ಭೈರಪ್ಪ
* ಪಾರಿಜಾತ ಕಲಾವಿದೆ ಎಲ್ಲವ್ವ ದುರ್ಗಪ್ಪ ರೊಡ್ಡಿ,
* ನಿವೃತ್ತ ಪ್ರಾಧ್ಯಾಪಕ ಕೆ.ಜಿ.ನಾಗರಾಜಪ್ಪ
* ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್. ಮಳಿಮಠ
* ಸಾಮಾಜಿಕ ಕಾರ್ಯಕರ್ತ ಜಿ.ಶಂಕರ್
* ಯೋಗಾಚಾರ್ಯ ಡಾ.ಪಿ.ಕೆ.ಎನ್. ಅಯ್ಯಂಗಾರ್.