ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಲಹಂಕ ಶಾಸಕ ವಿಶ್ವನಾಥ್ ಮನೆಯಲ್ಲಿ 5 ಕೆಜಿ ಚಿನ್ನ

By Srinath
|
Google Oneindia Kannada News

lokayukta-raid-yelahanka-mla-sr-vishwanath-house
ಬೆಂಗಳೂರು, ಡಿ. 19: ಲೋಕಾಯುಕ್ತ ಕೋರ್ಟ್ ಆದೇಶದ ಮೇರೆಗೆ ಲೋಕಾಯುಕ್ತ ಪೊಲೀಸರು ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಮನೆಯ ಮೇಲೆ ಸೋಮವಾರ ಬೆಳಗ್ಗೆ ದಾಳಿ ನಡೆಸಿದ್ದು, 5 ಕೆಜಿ ಚಿನ್ನ ಮತ್ತು 1 ಲಕ್ಷ ರು. ನಗದು ಪತ್ತೆಯಾಗಿದೆ.

ಬೆಂಗಳೂರು ಲೋಕಾಯುಕ್ತ ಎಸ್ಪಿ ಶಿವಶಂಕರ್ ಮತ್ತು ಸಹಾಯಕ ಎಸ್ಪಿ ಗಿರೀಶ್ ನೇತೃತ್ವದ ತಡ ಈ ದಾಳಿ ಕೈಗೊಂಡಿದೆ. ಸಂಜೆವರೆಗೂ ದಾಳಿ ಮುಂದುವರಿಯುವ ಲಕ್ಷಣಗಳಿವೆ.

ವಿಶ್ವನಾಥ್ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಲೋಕಾಯುಕ್ತ ದಾಳಿ ನಡೆದಿದೆ. ವಿಶ್ವನಾಥ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಂಗಳೂರು ಗ್ರಾಮಾಂತರ ವಿಭಾಗದ ಯಲಹಂಕ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ.

ಯಲಹಂಕ ಮತ್ತು ಹೆಬ್ಬಾಳದಲ್ಲಿರುವ ಅವರ ಕಚೇರಿಗಳ ಮೇಲೆಯೂ ದಾಳಿ ನಡೆದಿದೆ. ದಾಖಲೆ ಪತ್ರಗಳು, ಚಿನ್ನಾಭರಣಗಳು, ಬ್ಯಾಂಕ್ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

English summary
Karnataka Lokayukta police on Monday ( Dec 19)raided the residence of Yelahanka MLA( BJP)S R Vishwanath. Recover 5 Kg gold and 1 lakh rupees in cash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X