ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಎಸ್ಸಿ ದಾಳಿ ; 6 ಲಷ್ಕರ್ ಉಗ್ರರಿಗೆ ಜೀವಾವಧಿ

By Mahesh
|
Google Oneindia Kannada News

ಬೆಂಗಳೂರು, ಡಿ.19: ನಗರದ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಮೇಲೆ 2005ರಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಧಿಸಿದಂತೆ ಅಪರಾಧಿಗಳಾಗಿರುವ 6 ಜನ ಲಷ್ಕರ್ ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ(ಡಿ.19) ಕೋರ್ಟ್ ಆದೇಶ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ 6 ಉಗ್ರರನ್ನು ಅಪರಾಧಿಗಳೆಂದು ತೀರ್ಮಾನಿಸಿ 2ನೇ ತ್ವರಿತಗತಿ ನ್ಯಾಯಾಲಯ ಶನಿವಾರ(ಡಿ.17) ಘೋಷಿಸಿತ್ತು. ಶಿಕ್ಷೆಯ ಪ್ರಮಾಣದ ಬಗ್ಗೆ ಸೋಮವಾರ(ಡಿ.19) ಆದೇಶ ನೀಡಿದೆ.

2005 ಡಿಸೆಂಬರ್ 28 ರಂದು ಪ್ರತಿಷ್ಠಿತ ಭಾರತೀಯ ವಿಜ್ಞಾನ ಭವನದ ಮೇಲೆ ದಾಳಿ ನಡೆಸಿದ್ದ ಉಗ್ರರು ದಿಲ್ಲಿಯ ಐಐಟಿ ನಿವೃತ್ತ ಪ್ರೊಫೆಸರ್ ಎಂಸಿ ಪುರಿ ಅವರನ್ನು ಹತ್ಯೆ ಮಾಡಿದ್ದರು. ಈ ದಾಳಿಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದರು.

ಜೀವಾವಧಿ ಶಿಕ್ಷೆ ಪಡೆದವರು: ಮಹಮ್ಮದ್ ರಿಯಾಜ್ ಉರ್ ರೆಹ್ಮಾನ್, ಅಫ್ಜರ್ ಪಾಶ, ಮೆಹಬೂಬ್ ಇಬ್ರಾಹಿಂ, ಸಾಬ್ ಚೊಪ್ದಾರ್, ನೂರುಲ್ಲಾ ಖಾನ್, ಮಹಮ್ಮದ್ ಇರ್ಫಾನ್, ನಾಜೀರ್.

ಮಲಪ್ಪುರಂ ಜಿಲ್ಲೆಯವನಾದ ನಾಜೀರ್ ಪ್ರಕರಣದ ಪ್ರಮುಖ ರುವಾರಿಯಾಗಿದ್ದು, ಮುಸ್ಲಿಂ ಯುವಕರ ತಲೆ ಕೆಡಿಸಿ ಜಿಹಾದ್‌ನಲ್ಲಿ ತೊಡಗಿಸುತ್ತಿದ್ದ. ಮುಸ್ಲಿಮ್ ಯುವಕರ ಮನವೊಲಿಸಿದ ಬಳಿಕ ಅವರನ್ನು ಭಯೋತ್ಪಾದನೆ ತರಬೇತಿಗಾಗಿ ಆತ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕಳುಹಿಸಿಕೊಡುತ್ತಿದ್ದ ಎನ್ನಲಾಗಿದೆ.

English summary
Six LeT men were sentenced to life imprisonment after they were found guilty for planning a terrorist attack in 2005 at Indian Institute of Science, Bangalore. A fast track court ordered convicted six members for criminal conspiracy, waging war against the country and under provisions of the Explosives Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X