ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಕಾಲೇಜಿನಲ್ಲಿ ಬಾತ್ ರೂಂ ಕೋ-ಎಜುಕೇಶನ್

By Srinath
|
Google Oneindia Kannada News

chinese-student-lovers-bathe-together
ಬೀಜಿಂಗ್, ಡಿ. 18: ಮಾಗಿಯ ಚಳಿಯಲ್ಲಿ ಕಚಗುಳಿಯಿಡುವಂತಹ ಸುದ್ದಿಯೊಂದು ಚೀನಾದ ಬಾತ್ ರೂಮುಗಳಲ್ಲಿ ಸುಳಿದಾಡುತ್ತಿದೆ. ಚೀನಾದ ಷಾಂಕ್ಸಿ ಪ್ರಾಂತ್ಯದ ವಿಶ್ವವಿದ್ಯಾಲಯವೊಂದು ತನ್ನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗಾಗಿ (ಪ್ರೇಮ ಪಾರಿವಾಳಗಳು ಅಂದರೆ ಸ್ಟೂಡೆಂಟ್ ಲವರ್ಸ್) ಏಕಾಂತದಲ್ಲಿ ಝಳಕದ ಪುಳಕಗಳ ಬಗ್ಗೆ ಪ್ರೇಮಬುಗ್ಗೆ ಚಿಮ್ಮಿಸಿದೆ.

ಇದಕ್ಕಾಗಿ ಮೂರು ಅಂತಸ್ತಿನ ಸ್ನಾನ ಕೋಣೆ ಸಂಕೀರ್ಣವನ್ನೂ ನಿರ್ಮಿಸಿರುವ ಕಾಲೇಜು ಏಳು ಪ್ರತ್ಯೇಕ, ಖಾಸಗಿ ಬಾತ್ ರೂಂಗಳನ್ನು ತೆರೆದಿದೆ. ಶವರ್ ಬಾತ್, ಟಬ್ ಬಾತ್, ಟಚ್ ಬಾತ್ ಹೀಗೆ ಏನೇನೋ ಝಳಕದ ಪುಳಕಗಳನ್ನು ಅಲ್ಲಿ ಬೋಧಿಸಲಾಗುತ್ತಿದೆ!

ಇಲ್ಲಿ ಕೇವಲ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೇ ತಮ್ಮ ತಮ್ಮ ಜೋಡಿಗಳೊಂದಿಗೆ ಸ್ನಾನದ ದಿವ್ಯಾನುಭವ ಕಾಣಬಹುದು ಅಂತೇನೂ ಇಲ್ಲ. ಅಧ್ಯಾಪಕರು, ಸಿಬ್ಬಂದಿಗೂ ಈ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲ. ಅವರವರ ಕುಟುಂಬಸ್ಥರೂ ಇಲ್ಲಿ ಬಂದು ಜೋಡಿ-ಸ್ನಾನ ಸುಖ ಕಾಣಬಹುದು.

ಆದರೆ ಈ ಕೋ-ಶವರ್ ಬಗ್ಗೆ ಪುಂಖಾನುಪುಂಖ ವ್ಯಾಖ್ಯಾನಗಳು, ಟೀಕೆಗಳು, ಮೆಚ್ಚುಗೆಗಳು ಹರಿದಾಡುತ್ತಿವೆ. ಹಲವರು ಮೆಚ್ಚಿಕೊಂಡಿದ್ದರೆ, ಕೆಲವರು ದೊಡ್ಡವರಾದ ಕಾಲೇಜು ಮಂದಿಗೆ ಇದು ತೀರಾ ಖಾಸಗಿ ವಿಚಾರ. ಅದನ್ನು ಹೀಗೆ ಬಹಿರಂಗವಾಗಿ ಹೇಳಿಕೊಡುವ ಜರೂರತ್ತು ಏನಿತ್ತು ಎಂದು ಮೂಗುಮುರಿದಿದ್ದಾರೆ. ನಮ್ಮ ಮಡಿವಂತಿಕೆಯ ಜನಕ್ಕೆ ಮಾಗಿಯ ಚಳಿಯಲ್ಲಿ ಕಚಗುಳಿಯಿಟ್ಟಂತಾಗಿದೆ.

ಇಂತಹ ಕಾಲೇಜಿಗೆ ಸೇರಿಕೊಳ್ಳಬೇಕು ಎಂದು ಅರ್ಜಿ ಗುಜರಾಯಿಸಲು ತಹತಹಿಸುವ ಮಂದಿಗೆ ನಿರಾಶೆ ಕಾದಿದೆ. ಏಕೆಂದರೆ ಪ್ರಸಕ್ತ ಸಾಲಿನಲ್ಲಿ ಅಡ್ಮಿಶನ್ಸ್ ಕ್ಲೋಸ್ ಆಗಿದೆಯಂತೆ!

English summary
A bathhouse in a university in north-west China's Shaanxi province has stirred controversy with its audacious policy that allows student lovers to shower together in private rooms. The three-storied bath centre in Northwestern Polytechnical University in Xi'an city provides seven private bathrooms for student couples.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X