ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳೇ ಫೇಸ್ ಬುಕ್ ಬಳಸಬೇಡಿ: ಪುತ್ರಿಯರಿಗೆ ಒಬಾಮಾ ಕಿವಿಮಾತು

By Srinath
|
Google Oneindia Kannada News

barack-obama-bars-daughters-from-facebook
ವಾಷಿಂಗ್ಟನ್, ಡಿ.18: ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್ ಬುಕ್ ಅನ್ನು ಬಳಸದಿರುವಂತೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಇಬ್ಬರು ಪುತ್ರಿಯರಿಗೆ ತಾಕೀತು ಮಾಡಿದ್ದಾರೆ. 'ನಮ್ಮ ಬಗ್ಗೆ ಅಪರಿಚಿತರೂ ತಿಳಿದುಕೊಳ್ಳುವ ಸಾಧ್ಯತೆಯಿದ್ದು, ಅದು ನಮಗೆ ಅಪಾಯಕಾರಿಯಾಗಲಿದೆ. ಆದ್ದರಿಂದ ಮಕ್ಕಳೇ ನೀವು ಫೇಸ್ ಬುಕ್ ಬಳಸುವುದು ಬೇಡ' ಎಂದು ಒಬಾಮಾ ತಮ್ಮ ಮಕ್ಕಳಿಗೆ ತಿಳಿಯ ಹೇಳಿದ್ದಾರೆ.

'ನಮ್ಮ ಖಾಸಗಿ ಜೀವನದ ಸಂಗತಿಗಳನ್ನು ಸಾರ್ವಜನಿಕವಾಗಿ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇದರ ದುರ್ಬಳಕೆಯೇ ಹೆಚ್ಚು' ಎಂದು 13 ವರ್ಷದ ಮಲಿಯಾ ಮತ್ತು 10 ವರ್ಷದ ಸಾಶಾಗೆ ಒಬಾಮಾ ಕಿವಿಮಾತು ಹೇಳಿದ್ದಾರೆ.

ವಿಚಿತ್ರವೆಂದರೆ ಚುನಾವಣೆ ಸಂದರ್ಭದಲ್ಲಿ ಇದೇ ಒಬಾಮಾ ಅವರು ಸಾಮಾಜಿಕ ಅಂತರ್ಜಾಲ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಮತ್ತು ಯಥೇಚ್ಛವಾವಾಗಿ ಬಳಸಿಕೊಂಡಿದ್ದರು. ಅಷ್ಟೇ ಅಲ್ಲ. ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿರುವ ಒಬಾಮಾ ಮತ್ತೆ ಇಂತಹ ವೇದಿಕೆಗಳಿಗೆ ಗಂಟು ಬಿದ್ದಿದ್ದಾರೆ.

English summary
US President Barack Obama has barred his daughters from using social networking site-Facebook. The President who himself is a cyber space enthusiast and uses social media ( for election campaigns also) said that it does not make much sense to put on display the private details of his family to the the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X