ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಐಸಿಐ ಬ್ಯಾಂಕಿನಲ್ಲಿ 1 ಲಕ್ಷ ರು. ಖೋಟಾ ನೋಟು ಪತ್ತೆ

By Srinath
|
Google Oneindia Kannada News

mumbai-icici-bank-one-lakh-fake-notes-detected
ಮುಂಬೈ, ಡಿ.18: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಆರ್ಥಿಕ ಭಯೋತ್ಪಾದನೆಗಳಿಗೆ ಕೊರತೆಯೇನೂ ಇಲ್ಲ. ಅದರಲ್ಲೂ ನಕಲಿ ಕರೆನ್ಸಿ ನೋಟುಗಳಿಗೆ ಮುಂಬೈ ಸ್ವರ್ಗ ಎನ್ನಬಹುದು. ಆದರೆ ಆತಂಕದ ಸುದ್ದಿಯೆಂದರೆ ಅಗ್ರಪಂಕ್ತಿಯ ಬ್ಯಾಂಕಿನಲ್ಲೂ ಇಂತಹ ನಕಲಿ ಕರೆನ್ಸಿ ನೋಟುಗಳು ಭಾರಿ ಮೌಲ್ಯದಲ್ಲಿ ಪತ್ತೆಯಾಗಿ ಆತಂಕಕಾರಿ ಸೃಷ್ಟಿಸಿದೆ.

ಮಹಾನಗರದ ಡೋಂಬಿವ್ಲಿಯಲ್ಲಿರುವ ಐಸಿಐಸಿಐ ಬ್ಯಾಂಕ್ ಶಾಖೆಯ ಮ್ಯಾನೇಜರ್ ತಮ್ಮ ಬ್ಯಾಂಕಿನಲ್ಲಿ 1,38,200 ಖೋಟಾ ನೋಟುಗಳು ಪತ್ತೆಯಾಗಿವೆ ಡಿ. 16ರಂದು ಮನಪಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಖಾತೆದಾರರೊಬ್ಬರು ಈ ಹಣವನ್ನು ಬ್ಯಾಂಕಿಗೆ ಜಮೆ ಮಾಡಿದ್ದಾರೆ. ಆದರೆ ಅವರ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ದಿನದ ವಹಿವಾಟು ಮುಗಿದ ಬಳಿಕ ಶಾಖೆಯ ನೆಲಮಾಳಿಗೆಯಲ್ಲಿರುವ ಭದ್ರತಾ ಕೊಠಡಿಯಲ್ಲಿ ತಪಾಸಣೆ ನಡೆಸುವಾಗ ಈ ನಕಲಿ ನೋಟು ಬೆಳಕಿಗೆ ಬಂತು. ಈ ಹಿಂದೆಯೂ ಬ್ಯಾಂಕಿಗೆ ನಕಲಿ ನೋಟುಗಳ ಜಮಾವಣೆಯಾಗಿತ್ತು. ಆದರೆ ಇಷ್ಟೊಂದು ಭಾರಿ ಮೊತ್ತದ ನೋಟುಗಳು ಇರಲಿಲ್ಲ ಎಂದು ಮ್ಯಾನೇಜರ್ ಅಲವತ್ತುಕೊಂಡಿದ್ದಾರೆ.

ಅಂದಹಾಗೆ, ರೂ. 1,000 ಮುಖಬೆಲೆಯ (54 ನೋಟುಗಳು), ರೂ. 500 (165 ನೋಟುಗಳು), ರೂ. 100 (14 ನೋಟುಗಳು) ಮತ್ತು ರೂ. 50 (14 ನೋಟುಗಳು) ಪತ್ತೆಯಾಗಿವೆ.

ನಕಲಿ ನೋಟು ಪತ್ತೆಯಾಗುತ್ತಿದ್ದಂತೆ ಅವುಗಳನ್ನು ಚಲಾವಣೆಗೆ ಬಿಡದೆ, ಪೊಲೀಸರಿಗೆ ಒಪ್ಪಿಸುತ್ತೇವೆ. ಅದಕ್ಕೂ ಮುನ್ನ ತೀವ್ರ ತಪಾಸಣೆ ನಡೆಸುತ್ತೇವೆ. ಇದನ್ನು ಆರ್ ಬಿಐ ಗಮನಕ್ಕೆ ತರುತ್ತೇವೆ. ಜತೆಗೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ಗಮನಕ್ಕ ತರುತ್ತೇವೆ' ಎಂದು ಐಸಿಐಸಿಐ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

English summary
ICICI Bank, Dombivli Branch in Mumbai lodged a complaint after it detected Rs 1,38,200 in fake currency that was deposited to the bank. On December 16, the Manpada police station registered the case of a bank receiving fake currency notes by an unknown depositor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X