ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖೇಶ್ ಅಂಬಾನಿ ವಿರುದ್ಧ ಅರೆಸ್ಟ್ ವಾರೆಂಟ್

|
Google Oneindia Kannada News

Arrest Warrent against Mukesh Ambani
ತ್ರಿಶೂರ್ (ಕೇರಳ), ಡಿ.17: ಕೇರಳದ ತ್ರಿಶೂರ್ ಜಿಲ್ಲೆಯ ಗ್ರಾಹಕ ನ್ಯಾಯಾಲಯ ರಿಲಾಯನ್ಸ್ ಗ್ರೂಪ್ ಚೇರ್ಮನ್ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ.

ಮೊಬೈಲ್ ಗ್ರಾಹಕರೊಬ್ಬರ ದೂರಿನನ್ವಯ ಈ ವಾರೆಂಟನ್ನು ಹೊರಡಿಸಲಾಗಿದೆ. 2003 ರಲ್ಲಿ ಎಂ.ಜೋಸೆಫ್ ಎಂಬ ಗ್ರಾಹಕರೊಬ್ಬರು ರಿಲಾಯನ್ಸ್ ಇನ್ಫೋಕಾಮ್ ಮೊಬೈಲನ್ನು 24,000 ರೂ ಗೆ ಖರೀದಿಸಿದ್ದರು. ಈ ಮೊಬೈಲ್ ನೊಂದಿಗೆ ಉಚಿತ ಹೊರ ಕರೆ, ಎಸ್ ಎಂಎಸ್ ಮುಂತಾದ ಸೌಲಭ್ಯಗಳನ್ನು ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಎಷ್ಟೋ ಪ್ರಯತ್ನದ ನಂತರವೂ ಯಾವುದೇ ಸೌಲಭ್ಯಗಳು ಇವರಿಗೆ ಲಭಿಸಿರಲಿಲ್ಲ.

2005 ರಲ್ಲಿ ಈ ಕಾರಣಕ್ಕಾಗಿ ತ್ರಿಶೂರ್ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯಲ್ಲಿ ಮೊಕದ್ದಮೆ ಹೂಡಲಾಯಿತು. ಜೋಸೆಫ್ ಅವರ ಪರವಾಗಿ ವಕೀಲ ಸೆಬಿ.ಜೆ.ಪುಲ್ಲೆ ಅವರು ವಾದ ನಡೆಸಿದ್ದರು. ಜೋಸೆಫ್ ಪರ ತೀರ್ಪಿತ್ತ ನ್ಯಾಯಾಲಯ ರಿಲಾಯನ್ಸ್ ಇನ್ಫೊಕಾಮ್ ಗೆ 24,000ರೂ ಜೊತೆ ಶೇಕಡಾ 12 ರಷ್ಟು ಬಡ್ಡಿ ಸೇರಿಸಿ ಕೊಡುವಂತೆ ಆದೇಶಿಸಿತ್ತು.

ಆದರೆ ವರ್ಷ ಕಳೆದ ನಂತರವೂ ಯಾವುದೇ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಮತ್ತೆ ಜೋಸೆಫ್ 2011ರ ಮಾರ್ಚ್ ತಿಂಗಳಿನಲ್ಲಿ ಕೋರ್ಟ್ ಮೊರೆಹೋಗಿದ್ದು, ಇದೀಗ ತ್ರಿಶೂರ್ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಪದ್ಮಿನಿ ಸುಧೀಶ್ ಮುಖೇಶ್ ಅಂಬಾನಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ. ಜೊತೆಗೆ ಫೆಬ್ರುವರಿ 15 ರೊಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶಿಸಲಾಗಿದೆ.

English summary
A consumer court in Thrissur district of Kerala has issued an arrest warrant against Reliance Industries chairman and the richest person in India, Mukesh Ambani. The reason for the warrant being used is based on a complaint by a mobile phone service customer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X