ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರವೇ ನಾರಾಯಣ ಗೌಡರ ಕೋಟಿಗಟ್ಟಲೆ ಅಕ್ರಮ ಆಸ್ತಿ

|
Google Oneindia Kannada News

Narayana Gowda
ಬೆಂಗಳೂರು, ಡಿ 16: ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ನಾರಾಯಣ ಗೌಡರು ಆಯ್ಕೆಯಾದ ನಂತರ ಅಕ್ರಮವಾಗಿ ಹಣ ಸಂಪಾದಿಸಿ ಕೋಟಿಗಟ್ಟಲೆ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಹೊಂದಿದ್ದಾರೆಂದು ವೇದಿಕೆಯ ಉಚ್ಚಾಟಿತ ಪ್ರಧಾನ ಕಾರ್ಯದರ್ಶಿ ಜಯದೇವ ಪ್ರಸನ್ನ ಗಂಭೀರ ಆರೋಪ ಮಾಡಿದ್ದಾರೆ.

ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳಿಂದ ಹಣ ಗಳಿಸಲು ತಮ್ಮ ಕಡೆ ಇರುವ ಮತದಾರರ ಪಟ್ಟಿಯ ನಕ್ಷೆಯ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ತೋರಿಸಿ ಹಣ ವಸೂಲು ಮಾಡುತ್ತಿದ್ದಾರೆಂದು ಜಯದೇವ ಪ್ರಸನ್ನ ಆರೋಪಿಸಿದ್ದಾರೆ.

ನಾರಾಯಣ ಗೌಡರು ವಿವಿಧ ಕಡೆಗಳಲ್ಲಿ ಬೇನಾಮಿ ಹೆಸರುಗಳಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ. ಈ ಬಗ್ಗೆ ದಾಖಲೆ ಸಹಿತ ಮಾಹಿತಿ ಸದ್ಯದಲ್ಲೇ ನೀಡುತ್ತೇನೆ. ಅವರು ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯ ತನಿಖೆ ನಡೆಸುವಂತೆ ಸದ್ಯದಲ್ಲೇ ಧರಣಿ ನಡೆಸುತ್ತೇನೆ. ನನ್ನ ಕುಟುಂಬಕ್ಕೆ ಗೌಡರು ಯಾವುದೇ ರೀತಿಯ ಆರ್ಥಿಕ ಸಹಾಯ ಮಾಡಿಲ್ಲ, ಅವರ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಜಯದೇವ ಪ್ರಸನ್ನ ಹೇಳಿಕೆ ನೀಡಿದ್ದಾರೆ.

ವೇದಿಕೆಯಿಂದ ನಾರಾಯಣ ಗೌಡರನ್ನು ಉಚ್ಚಾಟಿಸಲು 16 ಮಂದಿ ಸದಸ್ಯರು ಸಭೆ ಸೇರಿ ಎಲ್ಲರೂ ಸಹಿ ಮಾಡಿದ್ದರು. ಆದರೆ ಗೌಡರು ಅವರಿಗೆ ಬೆದರಿಕೆಯೊಡ್ಡಿ ಹಿಂದೆ ಸರಿಯುವಂತೆ ಮಾಡಿದ್ದಾರೆಂದು ಜಯದೇವ ಪ್ರಸನ್ನ ಆರೋಪಿಸಿದ್ದಾರೆ.

English summary
KRV president Narayana Gowda has crores worth of illegal property. Sacked KRV general secretary Jayadeva Prasanna said, very soon he will release the document of illegal property Gowda has.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X