ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿಕ್ಷುಕರ ಕೂಪದಿಂದ 300 ಮಕ್ಕಳು ಬಚಾವ್

By Mahesh
|
Google Oneindia Kannada News

Child Trafficking, Bangalore
ಬೆಂಗಳೂರು, ಡಿ.16: ಮೆಜೆಸ್ಟಿಕ್, ಕೆ. ಆರ್ ಮಾರ್ಕೆಟ್, ಶಿವಾಜಿನಗರ ಸೇರಿದಂತೆ ಇನ್ನಿತರ ಜನನಿಬಿಡ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಸುಮಾರು 300 ಮಕ್ಕಳನ್ನು ಬೆಂಗಳೂರು ಕ್ರೈಂ ಬ್ರಾಂಚ್ ಪೊಲೀಸರು ರಕ್ಷಿಸಿದ್ದಾರೆ.

ಬೆಂಗಳೂರಿನ ಕ್ರೈಂ ಬ್ರಾಂಚ್ ಪೊಲೀಸರು ಆರಂಭಿಸಿದ ಭಿಕ್ಷಾಟನೆ ಮುಕ್ತ ಅಭಿಯಾನಕ್ಕೆ ಸ್ವಯಂ ಸೇವಾ ಸಂಘಟನೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬೆಂಬಲ ನೀಡಿದ್ದರು.

ಕರ್ನಾಟಕದಿಂದ ವಿವಿಧೆಡೆಗಳಿಂದ ಹಾಗೂ ನೆರೆ ರಾಜ್ಯಗಳಿಂದ ಮಕ್ಕಳನ್ನು ಕರೆತಂದು ಭಿಕ್ಷಾಟನೆ ಬಿಡಲಾಗುತ್ತಿದೆ. ಮಕ್ಕಳನ್ನು ಅಪಹರಿಸಿ ತಂದು ಭಿಕ್ಷಾಟನೆಗೆ ನೂಕುವ ದೊಡ್ಡ ಜಾಲವೇ ಇದೆ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ, ರಕ್ಷಿಸಲ್ಪಟ್ಟ ಮಕ್ಕಳನ್ನು ನಿಮ್ಹಾನ್ಸ್ ಹಾಸ್ಪಿಟಲ್ ಬಳಿ ಇರುವ ಬಾಲ ಮಂದಿರದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮಕ್ಕಳನ್ನು ಭಿಕ್ಷಾಟನೆಗೆ ಬಿಡುವ ಮೊದಲು ಪುಟ್ಟ ಮಕ್ಕಳಿಗೆ ಡ್ರಗ್ಸ್ ನೀಡಿ ಅಸ್ವಸ್ಥರಾಗಿಲಾಗುತ್ತದೆ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ಆಯುಕ್ತ ಮಿರ್ಜಿ ಹೇಳಿದರು.

English summary
A child begging racket busted in the IT city after Bangalore police have rescued around 300 children, who were trafficked, drugged and forced to beg on the streets. The children who were rescued by the police team were all infants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X