ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ ಗೆ ಬಾಂಬ್ ಬೆದರಿಕೆ, ಟೆಕ್ಕಿಗಳು ಉದ್ವಿಗ್ನ

By Mahesh
|
Google Oneindia Kannada News

Bomb threat to TCS
ಚೆನ್ನೈ, ಡಿ.16: ದೇಶದ ಅತೀ ದೊಡ್ಡ ಸಾಫ್ಟ್ ವೇರ್ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಗೆ ಶುಕ್ರವಾರ(ಡಿ.16) ಬಾಂಬ್ ಬೆದರಿಕೆ ಕರೆ ಬಂದಿದೆ. ಅಂಬತ್ತೂರಿನಲ್ಲಿರುವ ಐಟಿ ಪಾರ್ಕ್ ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಸಾವಿರಾರು ಉದ್ಯೋಗಿಗಳು ಕಚೇರಿ ಬಿಟ್ಟು ರಸ್ತೆಗೆ ಬಂದಿಳಿದಿದ್ದಾರೆ.

ಟಿಸಿಎಸ್ ತರಬೇತಿ ಕೇಂದ್ರ ಅಲ್ಲದೆ ಹತ್ತು ಹಲವು ಐಟಿ ಕಂಪೆನಿಗಳು ಈ ಐಟಿ ಪಾರ್ಕ್ ನಲ್ಲಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ವಿಶೇಷ ಪೊಲೀಸ್ ಪಡೆ ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸುತ್ತಿದ್ದಾರೆ.

ಶುಕ್ರವಾರ ಮುಂಜಾನೆ ಬಾಂಬ್ ಬೆದರಿಕೆ ಕರೆ ಬಂದ ತಕ್ಷಣ ಟ್ರೈನಿಗಳು, ಉದ್ಯೋಗಿಗಳನ್ನು ಕಚೇರಿಯಿಂದ ಹೊರ ಬರುವಂತೆ ಸೂಚಿಸಲಾಯಿತು. ಬೇರೆ ಕಡೆಗೆ ಎಲ್ಲರನ್ನು ಸ್ಥಳಾಂತರಿಸಲಾಗಿದೆ.

ಅಂಬತ್ತೂರಿನ ತರಬೇತಿ ಕೇಂದ್ರಕ್ಕೆ ಮಾತ್ರ ಬೆದರಿಕೆ ಬಂದಿರುವುದರಿಂದ ಇತರೆ ಕೇಂದ್ರಗಳು ಎಂದಿನಂತೆ ತಮ್ಮ ಕೆಲಸ ನಿರ್ವಹಿಸುತ್ತಿದೆ ಎಂದು ಟಿಸಿಎಸ್ ವಕ್ತಾರರು ಹೇಳಿದ್ದಾರೆ.

English summary
More than 1,000 employees were evacuated following a bomb scare in the premises of the Tata Consultancy Services (TCS) in Ambattur, Chennai on Friday, Dec 16. Many other IT companies are also there in the park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X